ನಮಸ್ತೆ
ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಅಕ್ಷಯ ಪ್ರಕಾಶನದವರು ಹಮ್ಮಿಕೊಂಡಿದ್ದರು.. ಅದೇನೋ ಒಂದು ರೀತಿಯ ಕಂಡರಿಯದ ಸಂಭ್ರಮ ಸಡಗರ ಅಲ್ಲಿ ತುಂಬಿತ್ತು. ಬ್ಲಾಗ್ ಲೋಕದ ಮಿತ್ರರನೇಕರು ಅಲ್ಲಿ ನೆರೆದಿದ್ದರು. ಮೂರು ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದವರೇ ಪುಸ್ತಕ ಬಿಡುಗಡೆ ಮಾಡಿದ್ದೂ ವಿಶೇಷ. ಪ್ರಕಾಶಣ್ಣನ " ಹೆಸರೇ ಬೇಡ" ಪುಸ್ತಕವನ್ನು ಪ್ರಸಿದ್ದ ಅಂಕಣಕಾರರಾದ ಶ್ರೀ ಜೀ.ಏನ್. ಮೋಹನ್ ರವರು, ಶಿವಣ್ಣನ " ವೆಂಡರ್ ಕಣ್ಣು" ಪುಸ್ತಕವನ್ನು ಶ್ರೀ ನಾಗೇಶ್ ಹೆಗ್ಡೆ ರವರು ಮತ್ತು ದಿವಾಕರ್ ಹೆಗ್ಡೆ ರವರ " ಉದ್ದಾರ -ಸಂತೆ" ಪುಸ್ತಕವನ್ನುಶ್ರೀ ಡಾ. ಬಿ.ವಿ. ರಾಜಾರಾಂ ರವರು ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ನಾಲ್ಕು ಮಾತನಾಡಿದರು.
ಪುಸ್ತಕಗಳ್ಳನ್ನು ಯಾರಾದರು ಲೇಖಕರೋ ಅಥವಾ ಸಾಹಿತಿಗಳೋ ಬರೆದಿದಲ್ಲಿ ಅಂತಹ ವಿಶೇಷವೇನು ಇರುತ್ತಿರಲ್ಲಿ. ಆದರೆ ನಾನು ಈಗ ಪರಿಚಯಿಸುತ್ತಿರುವ ಇಬ್ಬರು ವ್ಯಕ್ತಿಗಳು ನನಗೆ ಹಾಗು ನಮ್ಮೆಲರಿಗೆ ಸ್ಪೂರ್ತಿಯ ಚಿಲುಮೆಯನ್ನ ಚಿಮ್ಮುವಂಥಹವ್ಯಕ್ತಿತ್ವ ಉಳ್ಳವರು..
ಅವರ ಅನುಮತಿಯಿಲ್ಲದೆ ಅವರ ಬಗ್ಗೆ ಬರೆಯುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ.
ಮೊದಲಿಗೆ ಶಿವಣ್ಣನ ಬಗ್ಗೆ ಹೇಳ ಬಯಸುತ್ತೇನೆ:
ಒಬ್ಬ ದಿನಗೂಲಿ ನೌಕರನ ಮಗನಾಗಿ ಜನಿಸಿ, ಸಣ್ಣ ವಯಸ್ಸಿನಲ್ಲೇ ವಿದ್ಯಾಬ್ಯಾಸ ಮುಂದುವರಿಸುತ್ತ ಪೇಪರ್ ಹಾಕುವ ಹುಡುಗನಾಗಿ ದುಡಿಯಲು ಶುರು ಮಾಡಿ, ನಂತರ ಅದ್ದನ್ನೇ ವೃತ್ತಿಯನ್ನಾಗಿಸಿಕೊಂಡು ಇಂದು ಪೇಪರ್ ಏಜೆಂಟ್ ಆಗಿ, ಪ್ರವೃತ್ತಿಯಲ್ಲಿ ಅಂತಾರಾಷ್ಟ್ರೀಯ ಫೋಟೋಗ್ರಾಫ್ ಆಗಿ ಖ್ಯಾತಿಗಳಿಸಿರುವ, ಹಲವಾರು ಪತ್ರಿಕೆಗಳಿಗೆ ಚಿತ್ರ ಲೇಖನ ಗಳ್ಳನ್ನು ಬರೆದಿರುವ ಇವರು, ಇಂದು ನಮ್ಮ ಮುಂದೆ ಒಂದು ಪುಸ್ತಕದ ಕರ್ತೃಗಳಾಗಿ ನಿಲ್ಲುತ್ತಿರುವುದೇ ಒಂದು ಅವಿಸ್ಮರಣೀಯ ವಿಷಯ. ಸಾಮಾನ್ಯವಾಗಿ ತಾವು ಬರೆಯುವ ಪುಸ್ತಕ ಗಳ್ಳನ್ನ ತಮ್ಮ ಹೆಂಡತಿಗೋ, ಮಕ್ಕಳಿಗೋ, ತಂದೆ- ತಾಯಿಯವರಿಗೋ ಅರ್ಪಿಸುವುದು ಸರ್ವೇ ಸಾಮಾನ್ಯ, ಆದರೆ ನಮ್ಮ ಶಿವಣ್ಣ ತಾನು ಬರೆದ ಪುಸ್ತಕವನ್ನು ಅರ್ಪಿಸಿರುವುದ್ದನ್ನು ನೀವು ತಿಳಿದರೆ ಅವರ ವ್ಯಕ್ತಿತ್ವ ಎಂಥವುದೆಂದು ತಿಳಿಯುತ್ತದೆ.
ಚಳಿ, ಗಾಳಿ, ಮಳೆ ಎನ್ನದೇ...
ತಣ್ಣನೆ ಮುಂಜಾವಿನಲ್ಲಿ.....
ಬೆಚ್ಚನೆಯ ಬೆಳಗು ತರುವ...
ಅಸಂಖ್ಯಾತ, ಅನಾಮಿಕ...
ದಿನಪತ್ರಿಕೆ ಹಂಚುವ....
ಹುಡುಗರಿಗೆ....
ಅವರ ಲೇಖನಗಳ್ಳನ್ನು ಓದಲು ಅವರ ಬ್ಲಾಗ್ ಹೊಕ್ಕಿ ನೋಡಿ: http://chaayakannadi.blogspot.com/ತಣ್ಣನೆ ಮುಂಜಾವಿನಲ್ಲಿ.....
ಬೆಚ್ಚನೆಯ ಬೆಳಗು ತರುವ...
ಅಸಂಖ್ಯಾತ, ಅನಾಮಿಕ...
ದಿನಪತ್ರಿಕೆ ಹಂಚುವ....
ಹುಡುಗರಿಗೆ....
ಎರಡನೆಯದಾಗಿ ಪ್ರಕಾಶಣ್ಣನ ಬಗ್ಗೆ ಹೇಳ ಬಯಸುತ್ತೇನೆ:
ಇಟ್ಟಿಗೆ- ಸಿಮೆಂಟ್ ಖ್ಯಾತಿಯ ಪ್ರಕಾಶಣ್ಣ ವೃತ್ತಿಯಲ್ಲಿ ಒಬ್ಬ ಸಿವಿಲ್ ಇಂಜಿನಿಯರ್. ಆವರು ತಮ್ಮ ಬ್ಲಾಗ್ನಲ್ಲಿ ಬರೆಯುತಿದ್ದ ಲೇಖನಗಳ್ಳನ್ನು ಒಟ್ಟು ಗೂಡಿಸಿ ಹೊರ ತಂದಿರುವ ಹಾಸ್ಯ ಭರಿತ ಪುಸ್ತಕವೇ "ಹೆಸರೇ ಬೇಡ". ಅವರ ಬ್ಲಾಗ್ ವಿಳಾಸ : http://ittigecement.blogspot.com/
ಎಡದಿಂದ ಬಲಕ್ಕೆ: ಶಿವಣ್ಣ, ಜೀ.ಏನ್.ಮೋಹನ್, ಡಾ.ಬಿ.ವಿ.ರಾಜಾರಾಂ, ನಾಗೇಶ್ ಹೆಗ್ಡೆ, ಯಶವಂತ್ ಸರ್ದೇಶ್ ಪಾಂಡೆ, ದಿವಾಕರ್ ಹೆಗ್ಡೆ, ಸೀತಾರಾಮ ಹೆಗ್ಡೆ ಹಾಗು ಪ್ರಕಾಶಣ್ಣ.
ವಂದೇ ಮಾತರಂ