Wednesday, June 3, 2009

google ಅನ್ನು ಸಡ್ಡು ಹೊಡಿದಿತೆ Bing

ನಮಸ್ತೆ
ಅಂತರ್ಜಾಲ್ಲದಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಕ್ಷಣ ಮಾತ್ರದಲ್ಲಿ ನಿಮಗೆ ಹೊದಗಿಸ ಬಲ್ಲಂತಹ: ಶಕ್ತಿ ಗೂಗಲ್ ಗೆ ಇದೆ. ಮಗುವಿನಿಂದ ಹಿಡಿದು ಮುದುಕರವರಗೆ ಎಲ್ಲರ ಬಾಯಲ್ಲಿ ಸುಳಿದಾಡುವ ಪದ google.com. ಒಂದು ರೀತಿಯಲ್ಲಿ ಮನುಷ್ಯನಲ್ಲಿನ ಕ್ರಿಯಾಶೀಲತೆಯನ್ನ ನಾಶ ಗೊಳಿಸಿದೆ ಎಂಬಂಥ ಹೆಗ್ಗಳಿಕೆಗೂ ಕಾರಣವಾಗುತ್ತದೆ. ಗಣಕ ಲೋಕದ ದಿಗ್ಗಜ ಮೈಕ್ರೋಸಾಫ್ಟ್ ಗೂಗಲ್ ನ್ನು ಸಡ್ಡು ಹೊಡೆಯುವ ಸಲುವಾಗಿ ಹೊಸ ತಂತ್ರಾಂಶವನ್ನು ಅದ್ದಕಿಂತ ಹೆಚ್ಹಿನ ಸೌಲಭ್ಯಗಳೊಂದಿಗೆ "Bing.com" ಎಂಬ ಹೆಸರಿನಲ್ಲಿ ಅಂತರ್ಜಾಲವನ್ನು ಪ್ರವೇಶಿಸಿದೆ. google ಅನ್ನು ಸಡ್ಡು ಹೊಡಿದಿತೆ Bing ಎಂದು ಕಾದು ನೋಡಬೇಕು.. ಏನೇ ಆಗಲಿ ಮೈಕ್ರೋಸಾಫ್ಟ್ ಗೆ ಶುಭ ಹರಿಸೋಣ .......
ವಂದೇ ಮಾತರಂ....

Tuesday, June 2, 2009

ನಾನು ಚಿಕ್ಕವನಿದ್ದಾಗ...( ಈಗಲೂ ಚಿಕ್ಕವನೇ)

ನಮಸ್ತೆ
ನನ್ನ ಹಿಂದಿನ ಲೇಖನಕ್ಕೆ ಪ್ರತಿಕ್ರಯಿಸಿ ಚಾಯಕನ್ನಡಿಯ ಶಿವಣ್ಣ ಬರೆದ ಕಾಮೆಂಟ್ ಓದಿದ ನಂತರ ನನ್ನ ಬಾಲ್ಯದಿನಗಳ ನೆನಪಿನ ಅಂಗಳವನ್ನು ಕೆಥಕಿ ಒಂದು ಲೇಖನ ಬರೆಯಬೇಕೆನಿಸಿತು.
ನಾನು ಶಾಲೆಯಲ್ಲಿ ಓದುತ್ತಿರುವಾಗ( 5 ರಿಂದ ೭ನೆ ತರಗತಿ) ಮಕ್ಕಳಲ್ಲಿ ಜಾಗೃತಿ ಮೂಡಿಸಲು ನಮ್ಮ ಶಿಕ್ಷಕರು ನಮ್ಮನ್ನು ಪ್ರತಿ ವರ್ಷ ಯಾವುದಾದರು ಮಕ್ಕಳ ಚಿತ್ರವನ್ನು ತೋರಿಸಲು ನಮ್ಮುರಲ್ಲಿದ್ದ ಸುಪ್ರಸಿದ್ದ ( ಏಕೈಕ) ಚಿತ್ರ ಮಂದಿರಕ್ಕೆ ಕರೆದೊಯುತ್ತಿದರು. ಎರಡು ವಾರಗಳ ಮೊದಲೇ ದಿನಾಂಕ ಹಾಗು ಸಮಯ ನಿಗದಿಯಾಗುತ್ತಿತು. ಟಿಕೆಟ್ ನ ಬೆಲೆ ೨ ರುಪಾಯಿ ಇದ್ದರೇ ನಾನು ಮನೆಯಲ್ಲಿ ಸುಳ್ಳು ಹೇಳಿ ೪ ರುಪಾಯಿ ತೆಗೆದುಕೊಳ್ಳುತ್ತಿದ್ದೆ.
ನಾವು ಶಾಲೆಯಲ್ಲಿ ಆಡುವ ಪ್ರತಿಮಾತು ಚಿತ್ರದ ಕುರಿತೆ ಇರುತ್ತಿತು. ಕಾರಣ ನಾವು ವಿಕ್ಷಿಸುತ್ತಿದ್ದುದು ವರ್ಷಕ್ಕೆ ಅದೊಂದೇ ಚಿತ್ರ. ಚಿತ್ರ ಮಂದಿರಕ್ಕೆ ಏನೇನು ತಿಂಡಿ ತಿನಿಸುಗಳನ್ನು ಒಯ್ಯಬೇಕು, ಯಾರ ಪಕ್ಕದಲ್ಲಿ ಯಾರು ಕೂರಬೇಕು ( ನಾನು ಕೂರುತಿತುದ್ದು ನನ್ನ ಬಾಲ್ಯದ ಗೆಳತಿ ಲಾವಣ್ಯ ಳ ಪಕ್ಕದಲ್ಲಿ) ಹೀಗೆ ಹಲವಾರು ಚಿಂತನೆಗಳು. ಚಿತ್ರ ವಿಕ್ಷಿಸಿ ಬಂದ ನಂತರವು ಅದೇ ಗುಂಗಿನಲ್ಲಿ ಕೆಲವು ದಿನ ಕಳೆಯುತ್ತಿದ್ದೆವು.ನಾವು ಆ ದಿನಗಳಲ್ಲಿ ವೀಕ್ಷಿಸಿದ ಚಿತ್ರಗಳೆಂದರೆ "ನಾಗರ ಹೊಳೆ", "ಹುಲಿಯ ಹಾಲಿನ ಮೇವು" ಮತ್ತು "ಗಂಧದ ಗುಡಿ".
ವಂದೇ ಮಾತರಂ

ವಿದ್ಯಾರ್ಥಿಗಳೊಂದಿಗೆ ಸತ್ಯಹರಿಶ್ಚಂದ್ರ....

ನಮಸ್ತೆ

ಮೊನ್ನೆ ಶನಿವಾರ(೩೦-ಮೇ-೦೯) ಈಶ್ವರಿ ಚಿತ್ರಮಂದಿರದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಯಾವುದೊ ಸಂಘ ಸಂಸ್ಥೆಯೊಂದು "ಸತ್ಯಹರಿಶ್ಚಂದ್ರ" ಚಿತ್ರವನ್ನು ಪ್ರದರ್ಶಿಸಲಾಯಿತು.ಕಪ್ಪು-ಬಿಳುಪು ಅವತರಿನಿಕೆಯಲ್ಲಿ ಹಲವಾರು ಬಾರಿ ನೋಡಿದ್ದರು ಈ ಬಾರಿ ಬಣ್ಣದ ಅವತರಿನಿಕೆಯಲ್ಲಿ ನೋಡುವ ಅವಕಾಶ ಕಲ್ಪಿಸಿಕೊಟ್ಟ ಸಂಸ್ಥೆಗೆ ನಾನು ಚಿರಋಣಿ..
ಬೆಳ್ಳಿಗ್ಗೆ ೮:೦೦ ಗಂಟೆಗೆ ಪ್ರದರ್ಶನ ಇದ್ದುದರಿಂದ ಬಹುಶ: ಹುಡುಗರ ಸಂಖ್ಯೆ ಕಡಿಮೆ ಇರಬಹುದೆಂದು ಊಹಿಸಿದ್ದ ನನಗೆ ಆಶ್ಚರ್ಯ ಕಾದಿತ್ತು. ಅಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು..
ಚಿತ್ರ ಶುರುಅದಗಲಿಂದಲೂ ನಮ್ಮ ಹುಡುಗರ ಅಬ್ಬರ, ಚೀರಾಟ, ಶಿಳ್ಳೆಗಳಿಗೆ ಕೊನೆಯಿರಲಿಲ್ಲ. "ಕುಲದಲ್ಲಿ ಕೀಳ್ಯಾವುದೋ" ಹಾಡು ಶುರುವಾದಾಗಲಂತೂ ಅಬ್ಬಬ್ಬಾ, ಕುಣಿಥವೋ ಕುಣಿತ...
ವಂದೇ ಮಾತರಂ