Monday, August 23, 2010

ಅವಿಸ್ಮರ್ಣಿಯ ದಿನ......

ನಮಸ್ತೆ

ನಿನ್ನೆ ನಡೆದ ಪುಸ್ತಕ ಬಿಡುಗಡೆ ಸಮಾರಂಭ ನಂತರ ನಡೆದ ಬ್ಲಾಗ್ ಗೆಳೆಯರ ಮಿಲನದ ಸಡಗರ ನನ್ನ ಜೀವನದಲ್ಲೇ ಎಂದು ಮರೆಯಲಾಗದ ದಿನವಾಗಿ ಮನಃಪಟದಲ್ಲಿ ಉಳಿದು ಬಿಡುತ್ತದೆ.... ಕಾರ್ಯಕ್ರಮದ ಬಗ್ಗೆ ಹಲವಾರು ಗೆಳೆಯರು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ ( ನನಗೆ ಬರೆಯಲು ನನ್ನ ಬಳಿಯಿರುವ ಪದಪುಂಜ ಸಾಲದೇ ಬರೆಯುತ್ತಿಲ್ಲ, ಕ್ಷೆಮೆಯಿರಲಿ)...

ಆದರೆ ಅಲ್ಲಿ ಪೆನ್ನು-ಪೇಪರ್ ಬ್ಲಾಗಿನ ಅನಿಲ್ ಬೆಡಗೆ ಕ್ಲಿಕ್ಕಿಸಿರುವ ಕೆಲವು ಫೋಟೋಗಳನ್ನು ವೀಕ್ಷಿಸಿ ಆನಂದಿಸಿ....
ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ...

http://picasaweb.google.co.in/naveenkumar.bm/GubbiEnjaluAndJalanayanaBookRelease?authkey=Gv1sRgCIzbmMfHhITQIA&feat=directlink


ನಿಮ್ಮವ
ಹಳ್ಳಿ ಹುಡುಗ....

Thursday, August 19, 2010

ಸರ್ವರಿಗೂ ಅತ್ಹ್ಮಿಯ ಸ್ವಾಗತ..

ನಮಸ್ತೆ
ಕನ್ನಡ ಬ್ಲಾಗ್ ಲೋಕದ ಇಬ್ಬರು ದಿಗ್ಗಜರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಅತ್ಹ್ಮಿಯ ಹಾಗು ಆದರದ ಸ್ವಾಗತ.....


ನಿಮ್ಮವ
ಹಳ್ಳಿ ಹುಡುಗ....

Sunday, August 8, 2010

Friday, July 23, 2010

ನಾನು ಮತ್ತು ಕ್ಯಾಮೆರ, ಸ್ವಲ್ಪ ಫೋಟೋಗ್ರಫಿ ಭಾಗ-೧

ನಮಸ್ತೆ

ನನಗೆ ಫೋಟೋಗ್ರಫಿಯಯಲ್ಲಿ ಗೀಳನ್ನ (ಕ್ಷಮಿಸಿ ಆಸಕ್ತಿಯನ್ನ) ಹೆಚ್ಹಿಸಿದ ಛಾಯಕನ್ನಡಿಯ ಶಿವಣ್ಣ ಹಾಗು ಸ್ನೇಹಿತ ಮಹೇಶನಿಗೆ ಅನಂತಕೋಟಿ ನಮನಗಳು. ತನ್ನ ಅಗಾದ ಅಂದವನ್ನ ಹಂಚಿಕೊಂಡ ಪ್ರಕೃತಿ ಮಾತೆಗೆ ನಾನು ಚಿರಋಣಿ. ಫೋಟೋಗ್ರಫಿಯಲ್ಲಿ ನಾನು ಈಗ ತಾನೇ ಜನಿಸಿದ ಕೂಸು . ನಾ ತೆಗೆದ ಕೆಲವು ಫೋಟೋಗಳ್ಳನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ.

ಸಲಹೆ ಹಾಗು ಸೂಚನೆಗಳಿಗೆ ಸದಾ ನನ್ನ ಮನಸ್ಸಿನ ಬಾಗಿಲು ತೆರೆದಿರುತ್ತದೆ. ನೀವು ನೀಡುವಿರೆಂದು ಆಶಿಸುತ್ತ ನನ್ನ ಪಯಣವನ್ನ ಮುಂದುವರೆಸುತ್ತೇನೆ....















ನಿಮ್ಮವ
ಹಳ್ಳಿ ಹುಡುಗ

ವಂದೇ ಮಾತರಂ

Wednesday, July 21, 2010

ನನ್ನ ಕೂಸಿಗೊಂದು ಹೊಸ ಹೆಸರು.....

ನಮಸ್ತೆ

ಆತ್ಮಿಯ ಗೆಳೆಯರಿಗೆಲ್ಲ ನನ್ನ ಪ್ರೀತಿಯ ನಮಸ್ಕಾರ. ನಾನು ಏನೇ ಗೀಚಿದರು ಅದಕ್ಕೆ ಕಾಮೆಂಟ್ ಸಿ ನನ್ನನ್ನು ಬೆನ್ನು ತಟ್ಟಿ ಮತ್ತಷ್ಟು ಗೀಚಲು ಪ್ರೋತ್ಸಾಹಿಸಿದ ಬ್ಲಾಗ್ ಪ್ರಪಂಚದ (ಕುಟುಂಬದ) ಎಲ್ಲರಿಗು ಪ್ರಣಾಮಗಳು. naveenanindian.blogspot.com ಎಂಬ ಹೆಸರಿನೊಂದಿಗೆ ಬ್ಲಾಗ್ ಪ್ರಪಂಚಕ್ಕೆ ಈ ಪುಟ್ಟ ಹೆಜ್ಜೆ ಗಳ್ಳನ್ನ ಇಟ್ಟಿದ್ದೆ.
ಅದೇನೋ ಸರಿ, ನನಗೋ ಹಳ್ಳಿ ಹುಡುಗ ಎಂದು ಹೇಳಿಕೊಳ್ಳಲು ಏನೋ ಒಂದು ತರಹದ ಹಪಾಹಪಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದರಿಂದ ಆ ಹಕ್ಕು ನನಗೆ ಇದೆ ಎಂದು ಬಾವಿಸುತ್ತೇನೆ. (ಜಾಗತಿಕಾರಣದ ಹೊಡೆತಕ್ಕೆ ಸಿಕ್ಕಿ ಹಳ್ಳಿಯ ವಾತಾವರಣ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಮನಸ್ಸು ಆಗಾಗ ನನ್ನನ್ನು
ದುಃಖದ ಮಡುವಿನಲ್ಲಿ ದೂಡಿಬಿಡುತ್ತದೆ- ಇದು ಮತ್ತೊಂದು ಕಾರಣ).
ಆದರಿಂದ ನನ್ನ ಬ್ಲಾಗಿಗೆ ಮರು ನಾಮಕರಣ ಮಾಡಲು
ನಿರ್ದರಿಸಿ
ಹಲವು ಹೆಸರುಗಳನ್ನ ಹುಡುಕುತಿದ್ದಾಗ ನನಗೆ ಹೊಳೆದಿದ್ದು ಈ ಹೆಸರು ಹಳ್ಳಿಹುಡುಗನಮಾತು(hallihuduganamaathu).
ಈ ಹಳ್ಳಿ ಹುಡುಗನಿಗೆ ನಿಮ್ಮೆಲ್ಲರ ಪ್ರೀತಿ- ಪ್ರೋತ್ಸಾಹ ಈಗೆ ಮುಂದುವರೆಯಲಿ ಎಂದು ಕೋರುತ್ತೇನೆ.
ವಂದೇ ಮಾತರಂ

Friday, July 16, 2010

ಬಸವನ ಬಾಗೇವಾಡಿ- ಬಿ(ವಿ)ಜಾಪುರ ಜಿಲ್ಲೆ....

ನಮಸ್ತೆ
ಆಗಿನ ಕಾಲದಲ್ಲೇ ಜಾತಿ- ಪಂಗಡಗಳ್ಳನ್ನ ದೂರ ಸರಿಸಿದ ಮಹಾನ್ ವ್ಯಕ್ತಿ ದೇಶ ಕಂಡ ಅಪ್ರತಿಮ ವಚನಕಾರ- ಸಂತ ಶ್ರೀ ಬಸವಣ್ಣ ನವರ ಜನ್ಮ ಸ್ಥಳ ಬಸವನ ಬಾಗೇವಾಡಿ- ಬಿ(ವಿ)ಜಾಪುರ ಜಿಲ್ಲೆ . ಬಿಜಾಪುರ ನಗರದಿಂದ 43 ಕಿಲೋ ಮೀಟರ್ ಬಸ್ ಪಯಣದ ನಂತರ ಸಿಗುವ ಒಂದು ಪಟ್ಟಣ . ಇತ್ತಿಚಿಗೆ ಬೇಟಿ ಕೊಟ್ಟಾಗ ಅಲ್ಲಿ ತೆಗೆದ ಕೆಲವು ಫೋಟೋಗಳು ನಿಮಗಾಗಿ.....























ಬಸವ ತೀರ್ಥ

ವಂದೇ ಮಾತರಂ