Wednesday, July 15, 2009

ಇನ್ಫೋಸಿಸ್ ಎಂಬ ಮಹಾನಗರಿಯಲ್ಲಿ...

ನಮಸ್ತೆ
ಒಬ್ಬ ಸಾಮಾನ್ಯ ಶಾಲಾ ಮೇಷ್ಟ್ರ ಮಗ ಎಂಥಹ ಮಹಾನ್ ಸಾಧನೆಯನ್ನ ಮಾಡಬಹುದು ಎಂದು ನೋಡಲು ಒಮ್ಮೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಇನ್ಫೋಸಿಸ್ ಸಂಸ್ಥೆಗೆ ಹೋಗಿ ಬನ್ನಿ. ೨೮ ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ಇಂಜಿನಿಯರ್ ಒಬ್ಬ ಕನಸು ಕಂಡದರ ಪರಿಣಾಮ ಇಂದು ಸಾವಿರಾರು ಕೋಟಿ ಬಾಳುವ , ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ ಭಾರತ ಮಾತೆಯ ಕೀರ್ತಿ ಪತಾಕೆಯನ್ನ ಪ್ರಪಂಚದೆಲ್ಲೆಡೆ ಪಸರಿಸುತ್ತಿರುವ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ರತ್ನ ಶ್ರೀ ನಾರಾಯಣ ಮೂರ್ತಿಯಾವರಿಗೆ ಮತ್ತು ಅವರ ಸಂಗಡಿಗರಿಗೂ ಜೈ ಹೋ .
೧೯೯೯ರಲ್ಲಿ ನಾನು ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ ದಿನಗಳಿಂದಲೂ ನಾನು ಇನ್ಫೋಸಿಸ್ ಕಟ್ಟಡಗಳ್ಳನ್ನು ನೋಡಿ ಎಂದಾದರೂ ಒಂದು ದಿನ ಇಲ್ಲಿ ಪ್ರವೇಶ ಪಡೆಯಬೇಕೆಂಬ ಆಸೆ ನನ್ನ ಮನದಾಳದಲ್ಲಿ ಮೂಡಿತ್ತು .(ಬೆಂಗಳೂರಿನಿಂದ ನಮ್ಮ ಊರಿಗೆ ಹೋಗುವ ದಾರಿಯಲ್ಲಿ ಮುಖ್ಯರಸ್ತೆಯಲ್ಲೇ ಸಿಗುತ್ತದೆ).
ಮೊನ್ನೆ ಶಿಕ್ಷಕರಿಗಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ೫ ದಿನಗಳ ಕಾರ್ಯಗಾರ ಒಂದಕ್ಕೆ ನಮ್ಮ ಕಾಲೇಜನ್ನು ಪ್ರತಿನಿದಿಸುವ ಅವಕಾಶ ನನಗೆ ಸಿಕ್ಕಾಗ ಏನೋ ಒಂದು ಕಂಡರಿಯದ ಆನಂದವನ್ನು ಅನುಭವಿಸಿದೆ. ಜೂನ್ ೨೨ ರಿಂದ ೨೬ ರವರೆಗೆ ನಡೆದ ಕಾರ್ಯಗಾರದಲ್ಲಿ ಭಾಗವಹಿಸಿ ಒಂದಷ್ಟು ಹೊಸ ವಿಷಯಗಳನ್ನು ಕಲಿತುಕೊಂಡೆ. ಇತರೆ ಕಾಲೇಜುಗಳಿಂದ ಬಂದಿದ್ದ ಶಿಕ್ಷಕ ವೃಂದದ ಪರಿಚಯವು ಆಯಿತು.
ಅಲ್ಲಿ ಕ್ಲಿಕ್ಕಿಸಿದ ಒಂದಷ್ಟು ಫೋಟೋಗಳು...

ನಮ್ಮ ಪ್ರಾಜೆಕ್ಟ್ ಟೀಂನೊಂದಿಗೆ
ಹರ್ಕುಲೆಸ್ ಆಗುವ ಪ್ರಯತ್ನದಲ್ಲಿ

ಗೆಳೆಯ ಗಿರೀಶ್ ನೊಂದಿಗೆ ಎಲೆಕ್ಟ್ರಿಕ್ ಕಾರ್ ನಲ್ಲಿ

ಉದ್ಯಾನವನದಲ್ಲಿ
ನಮಗೆ ಅಚ್ಚುಕಟ್ಟಾಗಿ ಊಟ ಬಡಿಸಿದ ಸ್ನೇಹಿತ ರಾಜೇಶ್ ನೊಂದಿಗೆ...

ನನ್ನನ್ನು ಹೊರಲಾಗದೆ ಪಂಕ್ಚರ್ ಆದ ಬಡ ಸೈಕಲ್..

ಪಿರಮಿಡ್ ನಂತೆ ಕಾಣುವ ಗಾಜಿನ ಮನೆಯ ಮುಂದೆ..
ಕ್ಯಾಪ್ಶನ್ ನೀವೇ ಬರೆದುಕೊಳ್ಳಿ
ವಂದೇ ಮಾತರಂ

9 comments:

 1. ಚಿತ್ರ ಬರಹ ಎರಡೂ ಚೆನ್ನಾಗಿದೆ. ನಿಜವಾಗಿಯು ಹೌದು, ಒಬ್ಬ ಶಾಲಾಶಿಕ್ಷಕನ ಮಗನ ಕನಸು ನನಸಾದ ರೀತಿ ಅದು ನಮಗೆಲ್ಲ ಮಾದರಿ. ನೀವು-ನಾನು ಒ೦ದರ್ಥದಲ್ಲಿ ಹಳ್ಳಿ ಹೈದರೇ ಆದ್ದರಿ೦ದ ಇ೦ದು ನಮಗೆ ನಾರಾಯಣಮೂರ್ತಿಯ೦ಥವರು ರೋಲ್ ಮಾಡೆಲ್ ಅನಿಸುತ್ತಾರೆ. ಚೆನ್ನಾದ ಬರಹ.

  ReplyDelete
 2. ನವೀನ್,

  ನಾರಾಯಣಮೂರ್ತಿಯವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರು ಪ್ರತಿಯೊಬ್ಬರಿಗೂ ಮಾದರಿ..ಮತ್ತೆ ನಿಮಗೆ ಸಿಕ್ಕ ಅವಕಾಶಕ್ಕೆ ಅಭಿನಂದನೆಗಳು...ಅಲ್ಲಿ ತೆಗೆದ ಫೋಟೋಗಳು ಚೆನ್ನಾಗಿವೆ...

  ಧನ್ಯವಾದಗಳು.

  ReplyDelete
 3. Good Post Naveen
  ಎಲ್ಲ ಎತ್ತರಕ್ಕೆ ಬೆಳೆದವರೂ ಒಂದಿಲ್ಲೊಂದು ರೀತಿಯಲ್ಲಿ ಹಳ್ಳಿ ಸೊಗಡಿನ ಪರಿಚಿತರೇ...ಒಳ್ಲೆಯ ಮಾಹಿತಿ

  ReplyDelete
 4. ಜಲನಯನ ಅಣ್ಣ, ಶಿವಣ್ಣ, ಪರಾಂಜಪೆ ಅಣ್ಣ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ನನ್ನೊಂದಿಗೆ ಇರಲಿ...

  ReplyDelete
 5. ವಾವ್ ಇನ್ಫಿ....!

  ನಾನು ಇನ್ಫೋಸಿಸ್ (ಬಿ.ಪಿ.ಓ)ನಲ್ಲಿ ಒ೦ದೂವರೆ ವರುಷ ಕೆಲಸ ಮಾಡಿದ್ದೇನೆ ನವೀನ್...! ನೀವು ತೆಗೆದ ಫೋಟೋಗಳು ಆ ನೆನಪುಗಳನ್ನು ಮರುಕಳಿಸುವ೦ತೆ ಮಾಡಿತು....

  ನಾನು ಹಳ್ಳಿಯಿ೦ದ ಬ೦ದವನು. ಡಿಗ್ರಿಯಲ್ಲಿ ಓದುತ್ತಿರುವಾಗ ಇನ್ಫೋಸಿಸ್ ನಲ್ಲಿ ಕೆಲಸ ಗಿಟ್ಟಿಸಬೇಕೆ೦ದು ಒ೦ದೇ ಸಮನೆ ಕನಸು ಕಾಣುತ್ತಿದ್ದೆವು ನಾನು ಮತ್ತು ನನ್ನ ಗೆಳತಿ. ಅದು ನನಸಾದ ಸ೦ದರ್ಭದಲ್ಲಿ ಆದ ಸ೦ತೋಷ ಅಷ್ಟಿಷ್ಟಲ್ಲ....

  ತು೦ಬಾ ಇಷ್ಟವಾಯಿತು ಬರಹ....

  ReplyDelete
 6. awesome sir!! gr8 minds gr8 thoughts!

  ReplyDelete
 7. ಹಾಯ್ ರೀ,
  ನಿಮ್ಮ ಬ್ಲ್ಯಾಗ ಚೆನ್ನಾಗಿದೆ

  ReplyDelete
 8. ಹಳ್ಳಿಯ ಸೊಬಗಿಗೆ ಒಗ್ಗಿಕೊಂಡು ಸಿಲಿಕಾನ್ ಸಿಟಿಯ ಸಾಫ್ಟ್‍ವೇರ್ ಬದುಕನ್ನು ಕಂಡ ನಿಮ್ಮ ಬರಹ ಹಿಡಿಸಿತು. ಮತ್ತೆ ಬರೆಯಿರಿ...

  ReplyDelete
 9. ಸುಧೆಶಣ್ಣ, ವರುಣ್, ಲಕ್ಷ್ಮಿಕಾಂತ್ ಅಣ್ಣ, ಕನಸುರವರೆ ಬ್ಲಾಗ್ ಮತ್ತು ಲೇಖನ ಮೆಚ್ಚಿದಕ್ಕೆ ಧನ್ಯವಾದಗಳು... ಹೀಗೆ ಬರುತ್ತಿರಿ

  ReplyDelete