Monday, July 6, 2009

ನೋಡುವಾಸೆ???

ನಮಸ್ತೆ

ನನ್ನ ಸ್ನೇಹಿತ ವೇಣು ಗೋಪಾಲ್ ರೆಡ್ಡಿ ಬರೆದ ಕವನವನ್ನು ಅವರ ಅನುಮತಿಯೊಂದಿಗೆ ನಿಮಗಾಗಿ....

ಸಾಂಸ್ಕೃತಿಕ ಪರಂಪರೆಯ
ಸಾಮಾಜಿಕ ಮೌಲ್ಯಗಳ
ಕುಸಿತಕ್ಕೆ ಕಾರಣರಾಗಿರುವ
ದೇಶದ್ರೋಹಿಗಳ ಸಾಲಿಗೆ
'ಭಗತ್ ಸಿಂಗ್'ನಾಗುವಸೆ !

ನಿರಂಕುಶಮತಿಗಳಾಗಿ
ಅರಾಜಕತೆಯಲ್ಲಿ ತೊಡಗಿ
ದೇಶದ ಅಭಿವೃದ್ಧಿಗೆ ಅಡಚಣೆಯಾಗಿರುವ
ಭ್ರಷ್ಟರಾಜಕಾರಣಿಗಳ ಮಟ್ಟಿಗೆ
ಸರ್ವಧಿಕಾರಿ 'ಹಿಟ್ಲರ್' ನಾಗುವಸೆ!

ಬಡತನದಿಂದ ಬೆಂದು
ಅನಾರೋಗ್ಯದಿಂದ ಬಳಲಿ
ಅನಕ್ಷರತೆಯಿಂದ ಅನಾಥರಾಗಿರುವ
ನಿರ್ಭಾಗ್ಯವನ್ಥರಿಗೆ ದಾರಿದೀಪವಾಗಲು
'ಮದರ್ ಥೆರೆಸ' ಆಗುವ ಕಿರಿದಾಸೆ!

ನಿರುದ್ಯೋಗದಿಂದ ಕಂಗೆಟ್ಟು
ನಿರಾಶಾವಾದಿಗಳಾಗಿ ಅಧೀರರಾಗಿರುವ
ಯುವ ಜನತೆಗೆ ಆಸರೆ ನೀಡಲು
ಸ್ಪೂರ್ತಿಯ ಚಿಲುಮೆ
'ಸ್ವಾಮಿ ವಿವೇಕಾನಂದ'ರಾಗುವ ಹಿರಿದಾಸೆ!

ಮತಿಯ ಗಲಭೆ, ಮತಾಂತರ ನಿಲ್ಲಿಸಲು
ಪ್ರಕೃತಿಯನ್ನು ರಕ್ಷಿಸಿ
ಜನತೆಯಲ್ಲಿ ಸಹೋದರತ ಭಾವವನ್ನು ಬೆಳೆಸಲು
ನಮ್ಮ ಮತ ಮನುಜ ಮತ ಎಂದ
ರಾಷ್ಟ್ರ ಕವಿ 'ಕುವೆಂಪು' ಆಗುವ ಮಹದಾಸೆ!

ಸುಸಂಸ್ಕ್ರುತಿಯಿಂದ ಕೂಡಿದ
ಜತ್ಯಾತೀತತೆಯನ್ನು ಮೈಗೂಡಿಸಿಕೊಂಡ
ಅಭಿವೃದ್ದಿಶೀಲ ರಾಷ್ಟ್ರಗಳಲ್ಲೊಂದಾದ
ನನ್ನ 'ಭಾರತ' ವನ್ನು ನೋಡುವಾಸೆ
ಇದು ನನ್ನ, ನನ್ನ ಕೊನೆಯ ಆಸೆ!!!!

ಇಷ್ಟವಾದರೆ ನನ್ನ ಸ್ನೇಹಿತನಿಗೆ ಒಂದು ಪತ್ರ ಬರೆಯರಿ... ಅವರ ಇ-ಮೇಲ್ ವಿಳಾಸ veeranuma80@gmail.com..

ವಂದೇ ಮಾತರಂ...

3 comments:

  1. ನವೀನ್ ನಿಮ್ಮ ಸ್ನೇಹಿತನ ಕವನ ಚೆನ್ನಾಗಿ ಮೂಡಿಬಂದಿದೆ..

    ಹೌದು ನಿಮ್ಮ ಆಸೆಗಳಿಗೆ ಹಾರೈಸುವಾಸೆ...
    ನಮ್ಮ-ನಿಮ್ಮ ಭಾರತವನ್ನು ನೋಡುವಾಸೆ ಬೇಗನೆ ಈಡೇರಲಿ...ವಿಶ್ವಮಾನವನಾಗಿ ಭಾರತವನ್ನು ಕಾಣಿ...
    ತುಂಬಾ ಚೆಂದ ಇದೆ..
    -ಧರಿತ್ರಿ

    ReplyDelete
  2. ಧರಿತ್ರಿಯವರಿಗೆ ಧನ್ಯವಾದಗಳು...

    ReplyDelete
  3. ನವೀನ್, ಎಳೆಯವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಪ್ರತಿಫಲಿಸಿದ್ದೀಯಾ...(ತಮ್ಮನಂತೆಣಿಸಿ ಏಕವಚನ ಪ್ರಯೋಗ..ಆಕ್ಷೇಪಣೆಯಿದ್ದರೆ ತಿದ್ದಿಕೊಳ್ಳುತ್ತೇನೆ).
    ಎಂತಹ ವಿಚಾರಧಾರೆ ನಿನ್ನ ಬೆಳೆಯುತ್ತಿರುವ ಚೇತನದಲ್ಲಿ ಸಮ್ಮಿಳಿತವಾಗುತ್ತಿದೆಯೆಂದರೆ...ಮನಸ್ಸಿಗೆ ಸಮಾಧಾನವಾಗುತ್ತೆ, ಕೋಪ...ವ್ಯವಸ್ಥೆಯ ಬಗ್ಗೆ ನಿನ್ನ ಮೊದಲ ಎರಡು ಪದ್ಯಗಳಲ್ಲಿ ಬಿಂಬಿತವಾಗಿದೆ..ಚನ್ನಾಗಿ ಮೂಡಿದೆ...
    ಒಂದು ಸಂದೇಹ.... ಮೊದಲೆರಡು ಪದ್ಯದ ಕಡೆಯ ಪಾದದಲ್ಲಿ 'ಭಗತ್ ಸಿಂಗ್'ನಾಗುವಸೆ ! ಮತ್ತು
    ಸರ್ವಧಿಕಾರಿ 'ಹಿಟ್ಲರ್' ನಾಗುವಸೆ!
    ನಾಗುವಸೆ....??? ಕೀ ಬೋರ್ಡ್ ಪ್ರತಾಪವೇ..ಅಥವಾ ವಿಶೇಷ ಅರ್ಥದಲ್ಲಿ ಬಳಕೆಯಾದದ್ದೇ? ತಿಳಿಸುತ್ತೀಯಾ..??
    ಚನ್ನಾಗಿದೆ ಕವನ, ಅಭಿನಂದನೆ...

    ReplyDelete