ಒಬ್ಬ ಸಾಮಾನ್ಯ ಶಾಲಾ ಮೇಷ್ಟ್ರ ಮಗ ಎಂಥಹ ಮಹಾನ್ ಸಾಧನೆಯನ್ನ ಮಾಡಬಹುದು ಎಂದು ನೋಡಲು ಒಮ್ಮೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಇನ್ಫೋಸಿಸ್ ಸಂಸ್ಥೆಗೆ ಹೋಗಿ ಬನ್ನಿ. ೨೮ ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ಇಂಜಿನಿಯರ್ ಒಬ್ಬ ಕನಸು ಕಂಡದರ ಪರಿಣಾಮ ಇಂದು ಸಾವಿರಾರು ಕೋಟಿ ಬಾಳುವ , ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ ಭಾರತ ಮಾತೆಯ ಕೀರ್ತಿ ಪತಾಕೆಯನ್ನ ಪ್ರಪಂಚದೆಲ್ಲೆಡೆ ಪಸರಿಸುತ್ತಿರುವ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ರತ್ನ ಶ್ರೀ ನಾರಾಯಣ ಮೂರ್ತಿಯಾವರಿಗೆ ಮತ್ತು ಅವರ ಸಂಗಡಿಗರಿಗೂ ಜೈ ಹೋ .
೧೯೯೯ರಲ್ಲಿ ನಾನು ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ ದಿನಗಳಿಂದಲೂ ನಾನು ಇನ್ಫೋಸಿಸ್ ಕಟ್ಟಡಗಳ್ಳನ್ನು ನೋಡಿ ಎಂದಾದರೂ ಒಂದು ದಿನ ಇಲ್ಲಿ ಪ್ರವೇಶ ಪಡೆಯಬೇಕೆಂಬ ಆಸೆ ನನ್ನ ಮನದಾಳದಲ್ಲಿ ಮೂಡಿತ್ತು .(ಬೆಂಗಳೂರಿನಿಂದ ನಮ್ಮ ಊರಿಗೆ ಹೋಗುವ ದಾರಿಯಲ್ಲಿ ಮುಖ್ಯರಸ್ತೆಯಲ್ಲೇ ಸಿಗುತ್ತದೆ).
ಮೊನ್ನೆ ಶಿಕ್ಷಕರಿಗಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ೫ ದಿನಗಳ ಕಾರ್ಯಗಾರ ಒಂದಕ್ಕೆ ನಮ್ಮ ಕಾಲೇಜನ್ನು ಪ್ರತಿನಿದಿಸುವ ಅವಕಾಶ ನನಗೆ ಸಿಕ್ಕಾಗ ಏನೋ ಒಂದು ಕಂಡರಿಯದ ಆನಂದವನ್ನು ಅನುಭವಿಸಿದೆ. ಜೂನ್ ೨೨ ರಿಂದ ೨೬ ರವರೆಗೆ ನಡೆದ ಕಾರ್ಯಗಾರದಲ್ಲಿ ಭಾಗವಹಿಸಿ ಒಂದಷ್ಟು ಹೊಸ ವಿಷಯಗಳನ್ನು ಕಲಿತುಕೊಂಡೆ. ಇತರೆ ಕಾಲೇಜುಗಳಿಂದ ಬಂದಿದ್ದ ಶಿಕ್ಷಕ ವೃಂದದ ಪರಿಚಯವು ಆಯಿತು.
ಅಲ್ಲಿ ಕ್ಲಿಕ್ಕಿಸಿದ ಒಂದಷ್ಟು ಫೋಟೋಗಳು...


