Wednesday, May 27, 2009

ಒಂದು ಶೂ ಸುತ್ತ ಸುತ್ತುವ ಒಂದು ಅದ್ಭುತ ಚಲನಚಿತ್ರ....

ನಮಸ್ತೆ
ಇತ್ತಿಚಿನ ದಿನಗಳಲ್ಲಿ ಶೂಗಳು, ಬುಷ್ ನಿಂದ ಇಡಿದು ನಮ್ಮ ರಾಜಕಾರಣಿಗಳಿಗೆ ನಿದ್ದೆ ಕೆಡಿಸುತ್ತಿರುವ ವಿಚಾರ ತಿಳಿದೆ ಇದೆ. ಆದರೆ ಅದೇ ಶೂ ಅನ್ನು ಕಥಾವಸ್ತುವಗಿರಿಸಿಕೊಂಡು ಒಂದು ಅರ್ಥ ಪೂರ್ಣವಾದ ಚಿತ್ರವನ್ನ ಇರಾನಿನ ನಿರ್ದೇಶಕ ಮಜಿದ್ ಮಜಿದ್ಹಿ ಯವರು ತೆಗೆದಿದ್ದಾರೆ. children of heaven ಎಂಬ ಶೀರ್ಷಿಕೆ.
ಇರಾನಿನ ಒಂದು ಸಣ್ಣ ಬಡ ಕುಟುಂಬ. ತಂಗಿಯ ಹರಿದ ಶೂ ಅನ್ನು ಅಣ್ಣ ಹೊಲಿಸಲು ತೆಗೆದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಕಳೆದುಕೊಂಡು ಮನೆಗೆ ಹಿಂತಿರುಗುತ್ತಾನೆ. ಮನೆಯಲ್ಲಿ ಹೊಸ ಶೂ ಕೊಳ್ಳಲು ಹಣವಿಲ್ಲ ವೆಂದರಿತು ಅಣ್ಣನ ಶೂವನ್ನೇ ತಂಗಿಯು ಬಳಿಸಲು ನಿರ್ದದರಿಸುತ್ತಾರೆ. ತಂಗಿಗೆ ಬೆಳ್ಳಿಗೆ ಶಾಲೆ, ಅಣ್ಣನಿಗೆ ಮದ್ಯನದ ಶಾಲೆ. ಆದರಿಂದ ಶಾಲೆ ಮುಗಿದ ತಕ್ಷಣ ತಂಗಿ ಓಡುತ್ತ ಬಂದು ಅಣ್ಣನಿಗೆ ಶೂ ರವಾನಿಸಬೇಕು. ಈ ಮದ್ಯೆ ಬರುವ ಸನ್ನಿವೇಶಗಳನ್ನು ನೀವೇ ನೋಡಿ ಅನುಭವಿಸಬೇಕು.
ಎಲ್ಲರು ನೋಡಲೇಬೇಕಾದ ಒಂದು ಅರ್ಥಪೂರ್ಣ ಚಲನಚಿತ್ರ...


ವಂದೇ ಮಾತರಂ

3 comments:

  1. ನವೀನ್,
    ಉತ್ತಮ ಮಾಹಿತಿಯನ್ನು ಕೊಟ್ಟಿದ್ದಿರಿ. ಆ೦ಗ್ಲ ಚಲನಚಿತ್ರಗಳ ಬಗ್ಗೆ ನನ್ನ ತಿಳುವಳಿಕೆ ಅಷ್ಟಕ್ಕಷ್ಟೆ. ವ೦ದನೆ. ಅ೦ದ ಹಾಗೆ ನಿಮ್ಮ email Id ಕೊಡಿ.

    ReplyDelete
  2. ನವೀನ್,

    ಈ ಚಲನಚಿತ್ರವನ್ನು ನಾನು ನೋಡಿದ್ದೇನೆ. ಅದೊಂದು ಅದ್ಬುತವಾದ ಚಲನಚಿತ್ರ. ನೀವು ಇದರ ಬಗ್ಗೆ ಇನ್ನಷ್ಟು ಬರೆಯಬಹುದಿತ್ತೇನೋ..ಅನ್ನಿಸಿತು. ಹಾಗೂ ನನ್ನ ಬ್ಲಾಗಿನಲ್ಲಿ ಅದರ ವಿಸ್ತಾರವಾದ ವಿಮರ್ಶೆಯನ್ನು ಬರೆದಿದ್ದೇನೆ...
    http://chaayakannadi.blogspot.com/2008/12/blog-post_8300.html

    ಧನ್ಯವಾದಗಳು.

    ReplyDelete
  3. ಶಿವಣ್ಣ.. ಚಲನಚಿತ್ರದ ಬಗ್ಗೆ ನಿಮ್ಮ ಲೇಖನ ಓದಿದೆ.. ವಿವರಣೆ ಚೆನ್ನಾಗಿದೆ. ಮುಂದಿನ ಲೇಖನದಲ್ಲಿ "Color of Paradise" ಬಗ್ಗೆ ಬರೆಯುವ ಯೋಚನೆ ಇದೆ. ಆಗ ಮತ್ತಷ್ಟು ಬರೆಯಲು ಪ್ರಯತ್ನಿಸುತ್ತೇನೆ...

    ReplyDelete