Thursday, May 21, 2009

ಹಳೆ ವಿದ್ಯಾರ್ಥಿಗಳ ಮಿಲನಕೂಟ

ನಮಸ್ತೆ




ವೇಮನ ತಾಂತ್ರಿಕ ಮಹಾವಿದ್ಯಾಲಯ... ನಾನು ಓದಿದ ವಿದ್ಯಾ ಸಂಸ್ಥೆ.. ಹತ್ತನೆ ತರಗತಿಯಲ್ಲಿ ಎರಡನೇ ದರ್ಜೆಯೊಂದಿಗೆ ತೇರ್ಗಡೆಗೊಂಡು, ಆಗು-ಹೀಗೂ ಡಿಪ್ಲೋಮಾ ಮುಗಿಸಿ, ಇಂಜಿನಿಯರಿಂಗ್ ಪದವಿ ಪಡೆಯಲು ಪ್ರವೇಶ ಪಡೆದು ನಾನೆ ನಂಬಲು ಅಸಾಧ್ಯವಾದ ಪ್ರಗತಿಗೆ( ಉನ್ನತ ಪದವಿಯಲ್ಲಿ ವಿಶ್ವವಿದ್ಯನಿಲಯಕ್ಕೆ ಮೊದಲ ಸ್ಥಾನ) ಹಾಗು ನನ್ನಲ್ಲಿ ಜೀವನದ ಮೌಲ್ಯಗಳನ್ನ ತುಂಬಿ ಅಪೂರ್ವ ಬದಲಾವಣೆಗೆ ಕಾರಣವಾದ ವಿದ್ಯಾ ಸಂಸ್ಥೆ...


ಕಬ್ಬಿಣದ ಕಡಲೆಯಂತಿದ್ದ ಗಣಿತವನ್ನ ಬಹಳಷ್ಟು ಶ್ರದ್ದೆಯಿಂದ ಕಲಿಸಿದ ಶ್ರೀ ಸುರೇಶ್ ಸರ್, ಶ್ರೀ ಕೆಂಪೇಗೌಡ ಸರ್. ನನ್ನಲ್ಲಿ ಸಮಯಪ್ರಜ್ಞೆಯನ್ನ ಬೆಳೆಸಿದ ಶ್ರೀಮತಿ ಗೀತ ಮೇಡಂ, ನನ್ನಲ್ಲಿನ ನಾಯಕತ್ವ ಗುಣವನ್ನ ಬಯಲಿಗೆಳೆದ ಶ್ರೀ ಪ್ರಚೆತ್ ಸರ್, ನನ್ನನ್ನು ಸಮಾಜ ಸೇವಾ ಕಾರ್ಯ ಗಳ್ಳಲ್ಲಿ ತೊಡಗಲು ಬೆಂಬಲಿಸಿದ ನನ್ನ ಸಹಪಾಟಿಗಳು, ಹಿರಿಯರ ಸ್ತಾನದಲ್ಲಿ ನಿಂತು ನನ್ನ ಎಲ್ಲ ಚಟುವಟಿಕೆಗಳಿಗೆ ಬೆಂಬಲಿಸಿದ ನಮ್ಮ ಪ್ರಾಂಶುಪಾಲರಾದ ಶ್ರೀ ಡಾ. ರಂಗ ಮತ್ತು ಶ್ರೀ ಡಾ. ಯೆಲ್ಲ ರೆಡ್ಡಿ, ನನಗೆ ಪುಸ್ತಕ ಓದುವ ಗೀಳನ್ನ ಹತ್ಹಿಸಿದ ನಮ್ಮ ಗ್ರಂಥಪಾಲಕರಾದ ಶ್ರೀ ಅಶೋಕ್, ಶ್ರೀ ಮುರಳಿ, ಶ್ರೀ ಮೋಹನ್ ರವರಿಗೆ ನಾನು ಚಿರಋಣಿ...


ಇಷ್ಟೆಲ್ಲ ಮಾತಾಡಿದ್ದು ಮೊನ್ನೆ(20-May-2009) ನಡೆದ ನಮ್ಮ ಕಾಲೇಜಿನ ಹಳೆ ವಿದ್ಯರ್ಥಿಗಳ ಮಿಲನ ಕೂಟದಲ್ಲಿ. ತುಂಬ ಬಾವುಕನಾಗಿ ಮಾತಾಡಿದ್ದು ಅದೇ ಮೊದಲು. ನಾನು ವಿದ್ಯಾಬ್ಯಾಸ ಪಡೆದ ಸಂಸ್ಥೆ ಮತ್ತಷ್ಟು ಎತ್ಹರಕ್ಕೆ ಏರಲಿ ಏನ್ನುವುದೇ ನನ್ನ ಆಸೆ...


ವಂದೇ ಮಾತರಂ...

1 comment:

  1. ನವೀನ್,

    ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ....ಕಲಿಸಿಕೊಟ್ಟ ಗುರು ಮತ್ತು ಕಲಿಯಲು ಸೂರುಕೊಟ್ಟ ಶಾಲೆ ಕಾಲೇಜುಗಳನ್ನು ಈಗ ನೆನೆಸಿಕೊಳ್ಳುವವರು ತುಂಬಾ ಕಡಿಮೆ. ಗುರು ಮತ್ತು ಗುರುಕುಲದ ಬಗ್ಗೆ ಒಂದೆರಡು ಕೃತಜ್ಞತೆ ಮಾತುಗಳನ್ನು ಬರೆದಿದ್ದೀರಲ್ಲ...ನನಗಂತೂ ತುಂಬಾ ಖುಷಿಯಾಯಿತು...

    ನೀವು ಉನ್ನತ ಪದವಿಯಲ್ಲಿ ವಿಶ್ವವಿದ್ಯನಿಲಯಕ್ಕೆ ಮೊದಲ ಸ್ಥಾನ ಗಳಿಸಿದ್ದಕ್ಕೆ ಅಭಿನಂದನೆಗಳು.

    ReplyDelete