Sunday, August 16, 2009

ಜನನಿ ಜನ್ಮ ಭೂಮಿಶ್ಚ್ಯ, ಸ್ವರ್ಗಾದಪಿ ಗರಿಯೇಸಿ...

ನಮಸ್ತೆ
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಆಗಸ್ಟ್ ೧೫ ಎಂದರೆ ನನ್ನ ಮನಸ್ಸು ರೋಮಾಂಚನಗೊಳ್ಳುತ್ತದೆ .ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳುತಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳುತಿದ್ದೆ. ಶಾಲೆ ಬಿಟ್ಟ ನಂತರ ಪ್ರತಿ ವರ್ಷವೂ ಯಾವುದಾದರು ಶಾಲಾ ಕಾರ್ಯಕ್ರಮದಲ್ಲಿ ಮೂಕ ವೀಕ್ಷಕನಾಗಿ ಭಾಗವಹಿಸಿ ನನ್ನ ಬಾಲ್ಯದ ದಿನಗಳ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದೆ.

ಆದರೆ ಈ ಬಾರಿ ಉದ್ಯೋಗ ಗಳಿಸಿದ ನಂತರದ ಮೊದಲ ಸ್ವಾತಂತ್ರ್ಯ ದಿನಾಚರಣೆಯದ್ದರಿಂದ ಏನಾದರೂ ಹೊಸದಾಗಿ ಮಾಡಬೇಕೆನಿಸಿತು. ಆದರಿಂದ ನನಗೆ ಅ ಆ ಇ ಈ ಕಲಿಸಿದ ನಮ್ಮೂರ ಶಾಲೆಯಲ್ಲಿ ಆಚರಿಸಬೇಕೆಂದು ನಿಶ್ಚಯಿಸಿ ಮಕ್ಕಳ ಸಂಖ್ಯೆ ತಿಳಿಯಲು ಶಾಲಾ ಮುಖ್ಯಶಿಕ್ಷಕಿಯವರಿಗೆ ಫೋನಾಯಿಸಿದಾಗ ಅವರು ನನ್ನನ್ನೇ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದರು ( ಅದಕ್ಕೆ ಕಾರಣ ನಮ್ಮ ಅಜ್ಜನವರು ಆ ಶಾಲೆಯ ಹೇಳಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ). ಕಳೆದ ಶ್ಯೆಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಹೇಳಿ ಫೋನ್ ಇಟ್ಟೆ. ವಾರದ ಹಿಂದೆಯ ಕೊಡಬೇಕಾದ ಬಹುಮಾನಗಳನ್ನು ಹಾಗು ಶಾಲೆಯ ಆಷ್ಟು ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಕರಿದಿಸಿ ಇಟ್ಟು ಕೊಂಡೆ.

ಇಂದು ಬೆಳ್ಳಗೆ ೮:೦೦ ಗಂಟೆಗೆ ದ್ವಜರೋಹಣ ಕಾರ್ಯಕ್ರಮವಿತ್ತು. ನೆನ್ನೆ ಸುರಿದ ದಾರಕರ ಮಳೆಯಿಂದಾಗಿ ಮಕ್ಕಳು ಮಾಡಿಕೊಂಡಿದ್ದ ಸಕಲ ಸಿದ್ದತೆಗಳು ನೀರುಪಾಲಗಿದ್ದವು. ಆದರೂ ಸಹ ಕಂಗೆಡದೇ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಸಿದ್ದವಾಗಿದ್ದರು. ಸರಳವಾಗಿ ಸರಾಗವಾಗಿ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಬಹುಮಾನ ವಿತರಿಸಿ ಅವರೊಂದಿಗೆ ಪ್ರಭಾತ್ ಫೇರಿಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗಿದಾಗ ಏನೋ ಕಂಡರಿಯದ ಖುಷಿಯಲ್ಲಿ ಮನಸ್ಸು ತೇಲುತಿತ್ತು..

ಅಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳು...
ವಂದೇ ಮಾತರಂ...


5 comments:

  1. ನವೀನ್, ಎಂಥ ಒಳ್ಳೆ ಅನುಭವ ಅಲ್ವಾ.....

    ಸ್ವತಂತ್ರ ದಿನಾಚರಣೆಯ ಶುಭಾಶಯಗಳು.

    ReplyDelete
  2. ತಮಗೂ ಶುಭಾಶಯಗಳು..ತಡವಾದದ್ದಕ್ಕೆ ಕ್ಷಮಿಸಿ
    -ಧರಿತ್ರಿ

    ReplyDelete
  3. ಸಾರ್ಥಕವಾಗಿ ಸ್ವಾತ೦ತ್ರ್ಯ ದಿನಾಚಾರಣೆಯನ್ನು ಅನುಭವಿಸಿದ್ದೀರಾ ನವೀನ್....

    ReplyDelete
  4. ಹಳ್ಳಿ ಹುಡುಗ ಹಳ್ಳಿಯ ಸ್ಕೂಲಿನ ಮಕ್ಕಳಜೊತೆ ನಾಡ ಹಬ್ಬಗಳನ್ನು ಆಚರಿಸಿದ್ದು ನನ್ನನ್ನು ನನ್ನ ಹಳ್ಳಿಯ ಸ್ಕೂಲಿನ ದಿನಗಳತ್ತ ತಳ್ಳಿ ಆ ಸವಿನೆನಪುಗಳನ್ನು ಮತ್ತೆ ಮೆಲ್ಲುವಂತೆ ಮಾಡಿದೆ.
    ನವೀನ್ ನಿಮಗೆ ಮತ್ತು ನಿಮ್ಮ ಪರಿವಾರ ವರ್ಗಕ್ಕೆ ಗೌರಿ-ಗಣೇಶನ ಹಬ್ಬದ ಹಾರ್ದಿಕ ಶುಭಾಷಯಗಳು.

    ReplyDelete
  5. ಶಿವಣ್ಣ, ಸುದೆಶಣ್ಣ, ಧರಿತ್ರಿಯಕ್ಕ, ಜಲಾನಯನ ಸರ್ ಧನ್ಯವಾದಗಳು...

    ReplyDelete