Tuesday, August 11, 2009

ಸ್ವಾತಂತ್ಯ್ರ ಬಂದಿದ್ದು ಯಾರಿಗೆ ????

ನಮಸ್ತೆ
ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ತಾಯಿ ಭಾರತಾಂಬೆ ತನ್ನ ೬೨ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಲಿದ್ದಾಳೆ. ಈ ಸಂಧರ್ಭದಲ್ಲಿ ಬಹಳ ದಿನಗಳಿಂದ ನನ್ನ ಮನಸಿನಲ್ಲಿದ್ದ(ಇರುವ) ಈ ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದೇನೆ. ನೀವೇ ಉತ್ತರಿಸಿ...

ಸುಮಾರು ೧೦೦೦ ವರ್ಷಗಳ ದಬ್ಬಾಳಿಕೆಯನ್ನ ಸಹಿಸಿಕೊಂಡು, ೨೦೦ ವರ್ಷಗಳ ಕಾಲ ಲಕ್ಷಾಂತರ ಜನರು ತಮ್ಮ ಜೀವನವನ್ನ ಮುಡಿಪಾಗಿಸಿ ತಮಗಾಗಿ ಅಲ್ಲದೆ ಮುಂದಿನ ಪೀಳಿಗೆ ಸುಖವಾಗಿರಲೆಂದು ಹೋರಾಡಿ ತಂದುಕೊಟ್ಟಂತಹ ಈ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕೊಡುತ್ತಿದ್ದೀವೆಯೇ ಎನ್ನುವ ಪ್ರೆಶ್ನೆ???

ಹಗಲು ರಾತ್ರಿಯೆನ್ನದೆ, ಚಳಿ ಗಾಳಿಯನ್ನದೆ ನಮ್ಮ ಗಡಿಗಳಲ್ಲಿ ಕ್ಷಣ ಕ್ಷಣವು ಸಾವನ್ನು ಎದುರಿಸುತ್ತ ತಮ್ಮ ಜೀವನವನ್ನ ಯಾರಿಗಾಗಿಯೋ ಮುಡಿಪಾಗಿಸಿ ಭಾರತಮಾತೆಗೆ ರಕ್ಷಾ ಕವಚವಾಗಿ ದುಡಿಯುತ್ತಿರುವ ನಮ್ಮ ಯೋಧ ಸಹೋದರರ ಶ್ರಮಕ್ಕೆ ನಾವು ಬೆಲೆ ಕೊಡುತ್ತಿದ್ದೀವೆಯೇ ಎನ್ನುವ ಮತ್ತೊಂದು ಪ್ರೆಶ್ನೆ???

ಬೆಳ್ಳಗ್ಗೆ ಎದ್ದೊಡನೆ ಕರೆಂಟ್ ಇಲ್ಲದಿದ್ದರೆ, ನಲ್ಲಿಯಲ್ಲಿ ನೀರು ಬಾರದಿದ್ದರೆ, ಮನೆ ಮುಂದಿನ ಕಸ ತೆಗೆಯುವವ ಬಾರದಿದ್ದರೆ, ರಸ್ತೆಯಲ್ಲಿ ಒಂದು ಗುಂಡಿ ಕಂಡರೆ, ಬಸ್ನಲ್ಲಿ ಸ್ವಲ್ಪ ರಶ್ ಇದ್ದರೆ, ನಮ್ಮ ರಾಜಕಾರಣಿಗಳನ್ನೂ ಅಥವಾ ಸರ್ಕಾರಿ ಅಧಿಕಾರಿಗಳನ್ನೂ ಇನ್ನು ಸ್ವಲ್ಪ ಮುಂದುವರಿಸಿ ಒಟ್ಟಾಗಿ ನಮ್ಮ ದೇಶವನ್ನೇ ಹಿಯಾಳಿಸುತ್ತ ಕೂರುವ ಮಾಹಾನುಭಾವರನ್ನ ನಿಮ್ಮ ಕೊಡುಗೆ ಏನು ಎಂದು ಕೇಳುವ ಆಸೆ???

ಕೆಳಗೆ ಇರುವ ಚಿತ್ರಗಳನ್ನ ನೋಡಿದ ನಂತರ ನಿಮ್ಮ ಮನಸ್ಸೇನಾದರು ಕಲುಕಿದರೆ ನಿಮ್ಮ ಜೀವನದಲ್ಲಿ ಒಬ್ಬ ಅನ್ಯ ಮಗುವಿನ ವಿದ್ಯಬ್ಯಾಸಕ್ಕೆ ನೆರವಾಗಿ...

















ವಂದೇ ಮಾತರಂ.....

3 comments:

  1. ನವೀನ್...

    ನಿಮ್ಮ ಸತ್ಯದ ಮಾತು...
    ಮತ್ತು ಫೋಟೊಗಳು ಹೃದಯ ತುಂಬಿ ಬಂತು....

    ನಿಮ್ಮ ಲೇಖನ ಓದಿದಾಗ ಮತ್ತೆ ಅದೇ ಭಾವನೆ ಮರುಕಳಿಸಿತು...
    ನಿಮ್ಮೊಂದಿಗೆ ಮತ್ತೆ ಹಂಚಿಕೊಂಡೆ....



    ನಮ್ಮ ದೇಶ ಶ್ರೀಮಂತ ದೇಶ..
    ಇಲ್ಲಿ ಬಡತನವೇನಿದ್ದರು ನಮ್ಮ ರಾಜಕಾರಣಿಗಳು ಮಾಡಿದ್ದು...
    ನಮ್ಮ ಬಡತನಕ್ಕೆ ರಾಜಕೀಯದವರೆ ಕಾರಣ...

    ಚಂದ್ರಶೇಖರ್ ಪ್ರಧಾನ ಮಂತ್ರಿಯಾಗಿದ್ದಾಗ
    ವಿಶ್ವ ಬ್ಯಾಂಕ್ ಸಾಲ ತೀರಿಸಲು ನಮ್ಮ ಸ್ವಲ್ಪ ಬಂಗಾರ ಮಾರಾಟ ಮಾಡಿದರು...
    ಲಜ್ಜೆಯಿಲ್ಲದ ರಾಜಕಾರಣಿಗಳು...!
    ಆಗ ಯಶವಂತ್ ಸಿನ್ಹಾ ಹಣಕಾಸು ಮಂತ್ರಿಯಾಗಿದ್ದರು...

    "ಲಾಲ್ ಬಹಾದ್ದೂರ್ ಶಾಸ್ತ್ರಿ" ಅಂಥವರು ನಮ್ಮ ನಾಯಕರಾಗಬೇಕಿತ್ತು...

    ಶಾಸ್ತ್ರಿಯವರುಪ್ರಧಾನ ಮಂತ್ರಿಯಾಗಿದ್ದಾಗ ಅವರ ಮಗ
    "ಅನಿಲ್ ಶಾಸ್ತ್ರಿಯವರು " ಸೀಮೆ ಎಣ್ಣೆಗಾಗಿ...
    ಕ್ಯೂ ನಲ್ಲಿ ನಿಂತು ತರುತ್ತಿದ್ದರಂತೆ....

    hindinavarella yaakaagi ashtu kashta pattiddakke... naavu indu hige agiddeve....

    ತುಂಬಾ ಬೇಸರವೂ ಆಗುತ್ತದೆ....

    ಮೇಲಿನ ಮಾತುಗಳನ್ನು ನನ್ನ ಬ್ಲಾಗಿನಲ್ಲಿ ಹೇಳಿದ್ದೆ...

    ReplyDelete
  2. ನವೀನ್,

    ಉತ್ತಮ ಲೇಖನ ಮತ್ತು ಅದಕ್ಕೆ ತಕ್ಕಂತೆ ಫೋಟೋಗಳು.

    ReplyDelete
  3. ಪ್ರಕಾಶಣ್ಣ ಮತ್ತು ಶಿವಣ್ಣ ಲೇಖನ ಮೆಚ್ಚಿದಕ್ಕೆ ಧನ್ಯವಾದಗಳು...

    ReplyDelete