Tuesday, June 2, 2009

ನಾನು ಚಿಕ್ಕವನಿದ್ದಾಗ...( ಈಗಲೂ ಚಿಕ್ಕವನೇ)

ನಮಸ್ತೆ
ನನ್ನ ಹಿಂದಿನ ಲೇಖನಕ್ಕೆ ಪ್ರತಿಕ್ರಯಿಸಿ ಚಾಯಕನ್ನಡಿಯ ಶಿವಣ್ಣ ಬರೆದ ಕಾಮೆಂಟ್ ಓದಿದ ನಂತರ ನನ್ನ ಬಾಲ್ಯದಿನಗಳ ನೆನಪಿನ ಅಂಗಳವನ್ನು ಕೆಥಕಿ ಒಂದು ಲೇಖನ ಬರೆಯಬೇಕೆನಿಸಿತು.
ನಾನು ಶಾಲೆಯಲ್ಲಿ ಓದುತ್ತಿರುವಾಗ( 5 ರಿಂದ ೭ನೆ ತರಗತಿ) ಮಕ್ಕಳಲ್ಲಿ ಜಾಗೃತಿ ಮೂಡಿಸಲು ನಮ್ಮ ಶಿಕ್ಷಕರು ನಮ್ಮನ್ನು ಪ್ರತಿ ವರ್ಷ ಯಾವುದಾದರು ಮಕ್ಕಳ ಚಿತ್ರವನ್ನು ತೋರಿಸಲು ನಮ್ಮುರಲ್ಲಿದ್ದ ಸುಪ್ರಸಿದ್ದ ( ಏಕೈಕ) ಚಿತ್ರ ಮಂದಿರಕ್ಕೆ ಕರೆದೊಯುತ್ತಿದರು. ಎರಡು ವಾರಗಳ ಮೊದಲೇ ದಿನಾಂಕ ಹಾಗು ಸಮಯ ನಿಗದಿಯಾಗುತ್ತಿತು. ಟಿಕೆಟ್ ನ ಬೆಲೆ ೨ ರುಪಾಯಿ ಇದ್ದರೇ ನಾನು ಮನೆಯಲ್ಲಿ ಸುಳ್ಳು ಹೇಳಿ ೪ ರುಪಾಯಿ ತೆಗೆದುಕೊಳ್ಳುತ್ತಿದ್ದೆ.
ನಾವು ಶಾಲೆಯಲ್ಲಿ ಆಡುವ ಪ್ರತಿಮಾತು ಚಿತ್ರದ ಕುರಿತೆ ಇರುತ್ತಿತು. ಕಾರಣ ನಾವು ವಿಕ್ಷಿಸುತ್ತಿದ್ದುದು ವರ್ಷಕ್ಕೆ ಅದೊಂದೇ ಚಿತ್ರ. ಚಿತ್ರ ಮಂದಿರಕ್ಕೆ ಏನೇನು ತಿಂಡಿ ತಿನಿಸುಗಳನ್ನು ಒಯ್ಯಬೇಕು, ಯಾರ ಪಕ್ಕದಲ್ಲಿ ಯಾರು ಕೂರಬೇಕು ( ನಾನು ಕೂರುತಿತುದ್ದು ನನ್ನ ಬಾಲ್ಯದ ಗೆಳತಿ ಲಾವಣ್ಯ ಳ ಪಕ್ಕದಲ್ಲಿ) ಹೀಗೆ ಹಲವಾರು ಚಿಂತನೆಗಳು. ಚಿತ್ರ ವಿಕ್ಷಿಸಿ ಬಂದ ನಂತರವು ಅದೇ ಗುಂಗಿನಲ್ಲಿ ಕೆಲವು ದಿನ ಕಳೆಯುತ್ತಿದ್ದೆವು.ನಾವು ಆ ದಿನಗಳಲ್ಲಿ ವೀಕ್ಷಿಸಿದ ಚಿತ್ರಗಳೆಂದರೆ "ನಾಗರ ಹೊಳೆ", "ಹುಲಿಯ ಹಾಲಿನ ಮೇವು" ಮತ್ತು "ಗಂಧದ ಗುಡಿ".
ವಂದೇ ಮಾತರಂ

4 comments:

  1. ನವೀನ್,

    ಸೂಪರ್....

    ReplyDelete
  2. ಧನ್ಯವಾದಗಳು ಶಿವಣ್ಣ... ಬರುತ್ತಿರಿ

    ReplyDelete
  3. ನವೀನ್,
    ನಾನು ಕೂಡ ಶಾಲೆಗೆ ಚಕ್ಕರ್ ಹೊಡೆದು ಸಿನಿಮಾಗೆ ಹೈಸ್ಕೂಲು ದಿನಗಳಲ್ಲಿ ಹೋಗಿದ್ದಿದೆ, ಮು೦ದುಗಡೆ ಸಾಲಿನ ಬೆ೦ಚಿನಲ್ಲಿ ಒ೦ದು ರುಪಾಯಿ ತೆತ್ತು ಕುಳಿತು ನೋಡಿದ್ದಿದೆ. ಒ೦ದೇ ದಿನ ೪ ಶೋಗಳಲ್ಲಿ ಬೇರೆ ಬೇರೆ ಚಿತ್ರಮ೦ದಿರಗಲ್ಲಿ ಸಿನಿಮಾ ನೋಡಿ ತಲೆ ಚಿತ್ರಾನ್ನ ವಾಗಿದ್ದು ಇದೆ. ನಿಮ್ಮ ಬರಹ ಓದಿದಾಗ ಅದೆಲ್ಲ ನೆನಪಾಯಿತು. ನಿಮಗೆ ಈಗಲೂ ಸಿನಿಮಾ ನೋಡುವ ಹುಚ್ಚು ಇದೆಯೋ ? ನನಗ೦ತೂ ಅದು ಬಿಟ್ಟು ಹೋಗಿದೆ.

    ReplyDelete
  4. ಬಾಲಣ್ಣ.. ನಾನು ಥೇಟ್ ನಿಮ್ಮ ಹಾಗೆ ಇದ್ದೆ.. ನನ್ನ ಕಾಲೇಜು ದಿನಗಳ್ಳಲ್ಲಿ ವರ್ಷಕ್ಕೆ 164 ಚಿತ್ರಗಳ್ಳನ್ನ ನೋಡಿದ (ಕು)ಖ್ಯಾತಿ ನನ್ನ ಹೆಸರಿನಲ್ಲಿದೆ. ಆದರೆ ಹೀಗ ಸಂಪೂರ್ಣವಾಗಿ ಇಲ್ಲವಾಗಿದೆ.. ಬಹುಶ: ಅತಿವೃಷ್ಟಿ ಅನಾವೃಷ್ಟಿ ಅಂದರೆ ಇದೆ ಅನಿಸುತ್ತದೆ..
    ಹೀಗೆ ಬರುತಿರಿ

    ReplyDelete