ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಷ್ಟು ಚೆನ್ನಾಗಿ ಮುಡಿಬರುವುದೆಂದು ನಾನು ಕನಸಿನಲ್ಲೂ ನೆನೆದಿರಲಿಲ್ಲ. ಆ ರೀತಿ ಇತ್ತು ಮಣಿಕಾಂತ್ ಅಣ್ಣನ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕ ಬಿಡುಗಡೆ ಕಾರ್ಯಕ್ರಮ. ಅಣ್ಣನ ಆಮಂತ್ರಣ ಪತ್ರಿಕೆ ಮೇಲ್ ಮುಖಾಂತರ ನನಗೆ ತಲುಪಿದ ದಿನದಂದೇ ನಾನು ಆ ದಿನವನ್ನ ಕಾರ್ಯಕ್ರಮಕ್ಕೆ ಮಿಸಲಿಟ್ಟೆ....
ಕಾರ್ಯಕ್ರಮ ೧೧ ಗಂಟೆಗೆ ಇದ್ದರೂ ನನ್ನ ಪ್ರೀತಿಯ ನಟ ಪ್ರಕಾಶಣ್ಣನ ನೋಡುವ ಆಸೆಯಿಂದ ೯.೩೦ ಕೆಲ್ಲ ಕಲಾಕ್ಷೇತ್ರದಲ್ಲಿ ಹಾಜರಿದ್ದೆ. ಜೊತೆಗೆ ನಾನು ಇಷ್ಟಪಡುವಂಥಹ ಫೋಟೋಗ್ರಾಫರ್ ಮಲ್ಲಿಕರ್ಜುನರವರ ಬೇಟಿ ಆದದ್ದು ನಿಜಕ್ಕೂ ನಾನು ಅದೃಷ್ಟವಂತ ಅನ್ನೋದನ್ನ ಮತೊಮ್ಮೆ ಸಾಬಿತು ಪಡಿಸಿತು. ಅಂತಾರಾಷ್ಟ್ರೀಯ ಖ್ಯಾತಿಯಾ ಫೋಟೋಗ್ರಾಫರ್ ಜೊತೆಯಲ್ಲ ನಾನು ಮಾತಾಡಿದ್ದು ಎನ್ನುವಷ್ಟು ಸರಳ ವ್ಯಕ್ತಿ ಮಲ್ಲಿ...
ನಂತರ ರವಿಯಣ್ಣ, ವಿಶ್ವೇಶ್ವರ್ ಭಟ್, ಕೃಷ್ಣೆ ಗೌಡರ ಆಗಮನ. ಎಲ್ಲ ತಮ್ಮ ತಮ್ಮ ವೃತಿಯಲ್ಲಿ ದಿಗ್ಗಜರೆ.. ಕಾರ್ಯಕ್ರಮ ಶುರು ಆಗಿದು ಉಪಾಸನ ತಂಡದವರ ಸುಮಧುರ ಹಾಡುಗಳೊಂದಿಗೆ... ಇನ್ನು ಮಣಿಕಾಂತರವರು ಮಾತ್ರ ಈ ಕಾರ್ಯಕ್ರಮ ತನ್ನದಲ್ಲವೇನೋ ಅನ್ನೋ ರೀತಿಯಲ್ಲಿ ಓಡಾಡಿಕೊಂಡಿದ್ದು ನೋಡಿ ನನಗೆ ಆಶ್ಚರ್ಯ.
ಮೊದಲಿಗೆ ಕೃಷ್ಣೆ ಗೌಡರಿಂದ ಪುಸ್ತಕದ ವಿಮರ್ಶೆ ತುಂಬ ಸೊಗಸಾಗಿ ಮೂಡಿಬಂತು. ನಂತರ ಮಣಿಕಾಂತರವರು ತುಂಬ ಭಾವುಕರಾಗಿ ತಮಗೆ ಕನ್ನಡ ಕಲಿಸಿದ ಶಿಕ್ಷಕರನ್ನ ಅಭಿನಂದಿಸಿದ್ದು ಮಣಿಕಾಂತರ ಮೇಲಿದ್ದ ಅಭಿಮಾನವನ್ನ ಮತ್ತಷ್ಟು ಗಟ್ಟಿಗೊಳಿಸಿತು. ಅನಂತರ ರವಿಯಣ್ಣ ಎಂದಿನಂತೆ ಅಪ್ಪ-ಮಕ್ಕಳ ಮೇಲೆ ಒಂದಷ್ಟು ನಗೆ ಚಟಾಕಿ ಹರಿಸಿ ತಮ್ಮ ಹಾಗು ಮಣಿಕಾಂತರ ಸಂಬಂದವನ್ನ ತಿಳಿಸುತ್ತ ತಾಯಿ-ಮಕ್ಕಳ ಸಂಬಂಧ ಹೇಗಿರಬೇಕೆಂದು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು... ಪ್ರಕಾಶಣ್ಣ ಮಾತಾಡುತ್ತ ಅವರಿಗೂ ಬೆಂಗಳುರಿಗೂ ಇರುವ ಸಂಬಂದವನ್ನ ತುಂಬಾ ಭಾವುಕರಾಗಿ ವ್ಯಕ್ತಪಡಿಸಿದರು. ಭಾವುಕತೆ ತುಂಬಿದ್ದ ಆ ಕಾರ್ಯಕ್ರಮದಲ್ಲಿ ಭಟ್ಟರು ಸಹ ಇನ್ನಷ್ಟು ಭಾವುಕರಾಗಿ ತಮ್ಮ ಮತ್ತು ಮಣಿಕಾಂತರ ಒಡನಾಟವನ್ನ ತಿಳಿಸಿಕೊಟ್ಟು ಮಣಿಕಾಂತ್ ರವರಿಗೆ ಸಭೆಯ ಎದುರಲ್ಲೇ ಎರಡು ಕೈಯಿಂದ ನಮಸ್ಕಾರ ಮಾಡಿದ್ದು ನಿಜವಾಗಿಯು ನನ್ನ ಕಣ್ಣುಗಳ್ಳನ್ನು ತೇವಗೊಳಿಸಿದ್ದವು...
ಪುಸ್ತಕ ಕೊಂಡು ಎಲ್ಲರ ಹಸ್ತಾಕ್ಷರ ಪಡೆದು, ಮಲ್ಲಿಕಾರ್ಜುನರನ್ನ ವಂಧಿಸಿ ಕಲಾಕ್ಷೇತ್ರದಿಂದ ಹೊರ ನಡೆದಾಗ ಅದಂಥಹ ಸಂತೋಷ, ಸಂಭ್ರಮ ವರ್ಣಿಸಲು ಆಗದು ...
ಪ್ರಕಾಶಣ್ಣನೊಂದಿಗೆ
ಪುಸ್ತಕ ಬಿಡುಗಡೆ
ಎಡದಿಂದ ಬಲಕ್ಕೆ: ಶ್ರೀ ಉಪಾಸನ ಮೋಹನ್ , ಶ್ರೀ ಕೃಷ್ಣೆ ಗೌಡ, ಶ್ರೀ ಪ್ರಕಾಶ್ ರೈ, ಶ್ರೀ ರವಿ ಬೆಳೆಗೆರೆ, ಶ್ರೀ ವಿಶ್ವೇಶ್ವರ್ ಭಟ್ಟ್, ಶ್ರೀ ಮಣಿಕಾಂತ್,ಶ್ರೀಮತಿ ನಾಗರತ್ನ ಮಣಿಕಾಂತ್
ಅಂತಾರಾಷ್ಟ್ರೀಯ ಖ್ಯಾತಿಯಾ ಫೋಟೋಗ್ರಾಫರ್ ಮಲ್ಲಿಕಾರ್ಜುನರೊಂದಿಗೆ