Saturday, January 2, 2010

ಹೊಸ ವರ್ಷದ ಶುಭಾಶಯಗಳು...


ನಮಸ್ತೆ
ಸರ್ವರಿಗೂ ಹೊಸವರ್ಷವು ಶುಭತರಲೆಂದು ಕೋರುತ್ತೇನೆ. ವರ್ಷದ ಮೊದಲ ಅಂಕಣವನ್ನ, ನನ್ನ ಆತ್ಮಿಯ ವಿದ್ಯಾರ್ಥಿ (ಗೆಳೆಯ, ಸಹೋದರ ) ಜಯ ಭಾರ್ಗವ್ ನನಗಾಗಿ ರಚಿಸಿರುವ ಕವನ ದೊಂದಿಗೆ ಶುರು ಮಾಡಲು ಇಚ್ಚಿಸುತ್ತೇನೆ. ಧನ್ಯವಾದಗಳು ಭಾರ್ಗವ್...


ಹೊಸದಾದ ಈ ವರುಷ
ತರುತಿರಲಿ ನವ ಹರುಷ
ಕೂಡಿರಲಿ ನವ ಕನಸುಗಳ ಉಲ್ಲಾಸ
ಕಳೆಯುತಲಿ ದುಃಖ ದುಮ್ಮಾನಗಳ ಆಯಾಸ

ಹಿಂದಿನಾ ವರ್ಷದ ....ಸಿಹಿಕಹಿ ನೆನಪುಗಳ
ಮೆಲುಕು ಹಾಕುವಾ ಕಾಲ
ಮುಂದಿನಾ ಯುಗಕೆ
ಮುನ್ನುಡಿಯ ಬರೆಯುವಾ ಕಾಲ
ಹಿಂದೆ ಮುಂದಿನಾ ನಡುವೆ
ತಂದಿಳಿಸಿದೆ ಈ ಬಾಳ ಜಾಲ

ಹೊಸವರ್ಷದ ಈ ಹರುಷ
ಸಂಭ್ರಮಿಸದಿರಲಿ ಕೇವಲ ಪ್ರಥಮ ದಿವಸ
ಬಾಳೆಂಬ ನೌಕೆಯಲಿ ಅನುಕ್ಷಣವೂ
ಚಿಮ್ಮುತಿರಲಿ ಚೈತನ್ಯ ಸ್ಪರ್ಶ

ಉರುಳಲಿ ಕಾಲವು ಅದೆಷ್ಟೇ
ಬದಲಾಗದು ಈ ಭಾವುಕ ಮನಸಿನ ನಿಷ್ಠೆ
ಆಗಿರಲಿ ಈ ನಮ್ಮ ಬಂಧನ
ಸದಾ ಕಾಲ ಚಿರನೂತನ ....ನವನವೀನ

ವಂದೇ ಮಾತರಂ..