Sunday, August 16, 2009

ಜನನಿ ಜನ್ಮ ಭೂಮಿಶ್ಚ್ಯ, ಸ್ವರ್ಗಾದಪಿ ಗರಿಯೇಸಿ...

ನಮಸ್ತೆ
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಆಗಸ್ಟ್ ೧೫ ಎಂದರೆ ನನ್ನ ಮನಸ್ಸು ರೋಮಾಂಚನಗೊಳ್ಳುತ್ತದೆ .ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳುತಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳುತಿದ್ದೆ. ಶಾಲೆ ಬಿಟ್ಟ ನಂತರ ಪ್ರತಿ ವರ್ಷವೂ ಯಾವುದಾದರು ಶಾಲಾ ಕಾರ್ಯಕ್ರಮದಲ್ಲಿ ಮೂಕ ವೀಕ್ಷಕನಾಗಿ ಭಾಗವಹಿಸಿ ನನ್ನ ಬಾಲ್ಯದ ದಿನಗಳ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದೆ.

ಆದರೆ ಈ ಬಾರಿ ಉದ್ಯೋಗ ಗಳಿಸಿದ ನಂತರದ ಮೊದಲ ಸ್ವಾತಂತ್ರ್ಯ ದಿನಾಚರಣೆಯದ್ದರಿಂದ ಏನಾದರೂ ಹೊಸದಾಗಿ ಮಾಡಬೇಕೆನಿಸಿತು. ಆದರಿಂದ ನನಗೆ ಅ ಆ ಇ ಈ ಕಲಿಸಿದ ನಮ್ಮೂರ ಶಾಲೆಯಲ್ಲಿ ಆಚರಿಸಬೇಕೆಂದು ನಿಶ್ಚಯಿಸಿ ಮಕ್ಕಳ ಸಂಖ್ಯೆ ತಿಳಿಯಲು ಶಾಲಾ ಮುಖ್ಯಶಿಕ್ಷಕಿಯವರಿಗೆ ಫೋನಾಯಿಸಿದಾಗ ಅವರು ನನ್ನನ್ನೇ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದರು ( ಅದಕ್ಕೆ ಕಾರಣ ನಮ್ಮ ಅಜ್ಜನವರು ಆ ಶಾಲೆಯ ಹೇಳಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ). ಕಳೆದ ಶ್ಯೆಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಹೇಳಿ ಫೋನ್ ಇಟ್ಟೆ. ವಾರದ ಹಿಂದೆಯ ಕೊಡಬೇಕಾದ ಬಹುಮಾನಗಳನ್ನು ಹಾಗು ಶಾಲೆಯ ಆಷ್ಟು ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಕರಿದಿಸಿ ಇಟ್ಟು ಕೊಂಡೆ.

ಇಂದು ಬೆಳ್ಳಗೆ ೮:೦೦ ಗಂಟೆಗೆ ದ್ವಜರೋಹಣ ಕಾರ್ಯಕ್ರಮವಿತ್ತು. ನೆನ್ನೆ ಸುರಿದ ದಾರಕರ ಮಳೆಯಿಂದಾಗಿ ಮಕ್ಕಳು ಮಾಡಿಕೊಂಡಿದ್ದ ಸಕಲ ಸಿದ್ದತೆಗಳು ನೀರುಪಾಲಗಿದ್ದವು. ಆದರೂ ಸಹ ಕಂಗೆಡದೇ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಸಿದ್ದವಾಗಿದ್ದರು. ಸರಳವಾಗಿ ಸರಾಗವಾಗಿ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಬಹುಮಾನ ವಿತರಿಸಿ ಅವರೊಂದಿಗೆ ಪ್ರಭಾತ್ ಫೇರಿಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗಿದಾಗ ಏನೋ ಕಂಡರಿಯದ ಖುಷಿಯಲ್ಲಿ ಮನಸ್ಸು ತೇಲುತಿತ್ತು..

ಅಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳು...
ವಂದೇ ಮಾತರಂ...


Tuesday, August 11, 2009

ಸ್ವಾತಂತ್ಯ್ರ ಬಂದಿದ್ದು ಯಾರಿಗೆ ????

ನಮಸ್ತೆ
ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ತಾಯಿ ಭಾರತಾಂಬೆ ತನ್ನ ೬೨ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಲಿದ್ದಾಳೆ. ಈ ಸಂಧರ್ಭದಲ್ಲಿ ಬಹಳ ದಿನಗಳಿಂದ ನನ್ನ ಮನಸಿನಲ್ಲಿದ್ದ(ಇರುವ) ಈ ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದೇನೆ. ನೀವೇ ಉತ್ತರಿಸಿ...

ಸುಮಾರು ೧೦೦೦ ವರ್ಷಗಳ ದಬ್ಬಾಳಿಕೆಯನ್ನ ಸಹಿಸಿಕೊಂಡು, ೨೦೦ ವರ್ಷಗಳ ಕಾಲ ಲಕ್ಷಾಂತರ ಜನರು ತಮ್ಮ ಜೀವನವನ್ನ ಮುಡಿಪಾಗಿಸಿ ತಮಗಾಗಿ ಅಲ್ಲದೆ ಮುಂದಿನ ಪೀಳಿಗೆ ಸುಖವಾಗಿರಲೆಂದು ಹೋರಾಡಿ ತಂದುಕೊಟ್ಟಂತಹ ಈ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕೊಡುತ್ತಿದ್ದೀವೆಯೇ ಎನ್ನುವ ಪ್ರೆಶ್ನೆ???

ಹಗಲು ರಾತ್ರಿಯೆನ್ನದೆ, ಚಳಿ ಗಾಳಿಯನ್ನದೆ ನಮ್ಮ ಗಡಿಗಳಲ್ಲಿ ಕ್ಷಣ ಕ್ಷಣವು ಸಾವನ್ನು ಎದುರಿಸುತ್ತ ತಮ್ಮ ಜೀವನವನ್ನ ಯಾರಿಗಾಗಿಯೋ ಮುಡಿಪಾಗಿಸಿ ಭಾರತಮಾತೆಗೆ ರಕ್ಷಾ ಕವಚವಾಗಿ ದುಡಿಯುತ್ತಿರುವ ನಮ್ಮ ಯೋಧ ಸಹೋದರರ ಶ್ರಮಕ್ಕೆ ನಾವು ಬೆಲೆ ಕೊಡುತ್ತಿದ್ದೀವೆಯೇ ಎನ್ನುವ ಮತ್ತೊಂದು ಪ್ರೆಶ್ನೆ???

ಬೆಳ್ಳಗ್ಗೆ ಎದ್ದೊಡನೆ ಕರೆಂಟ್ ಇಲ್ಲದಿದ್ದರೆ, ನಲ್ಲಿಯಲ್ಲಿ ನೀರು ಬಾರದಿದ್ದರೆ, ಮನೆ ಮುಂದಿನ ಕಸ ತೆಗೆಯುವವ ಬಾರದಿದ್ದರೆ, ರಸ್ತೆಯಲ್ಲಿ ಒಂದು ಗುಂಡಿ ಕಂಡರೆ, ಬಸ್ನಲ್ಲಿ ಸ್ವಲ್ಪ ರಶ್ ಇದ್ದರೆ, ನಮ್ಮ ರಾಜಕಾರಣಿಗಳನ್ನೂ ಅಥವಾ ಸರ್ಕಾರಿ ಅಧಿಕಾರಿಗಳನ್ನೂ ಇನ್ನು ಸ್ವಲ್ಪ ಮುಂದುವರಿಸಿ ಒಟ್ಟಾಗಿ ನಮ್ಮ ದೇಶವನ್ನೇ ಹಿಯಾಳಿಸುತ್ತ ಕೂರುವ ಮಾಹಾನುಭಾವರನ್ನ ನಿಮ್ಮ ಕೊಡುಗೆ ಏನು ಎಂದು ಕೇಳುವ ಆಸೆ???

ಕೆಳಗೆ ಇರುವ ಚಿತ್ರಗಳನ್ನ ನೋಡಿದ ನಂತರ ನಿಮ್ಮ ಮನಸ್ಸೇನಾದರು ಕಲುಕಿದರೆ ನಿಮ್ಮ ಜೀವನದಲ್ಲಿ ಒಬ್ಬ ಅನ್ಯ ಮಗುವಿನ ವಿದ್ಯಬ್ಯಾಸಕ್ಕೆ ನೆರವಾಗಿ...

















ವಂದೇ ಮಾತರಂ.....

Monday, August 3, 2009

ದಶಕ ಕಳೆದ ಸಂತೋಷದಲ್ಲಿ...

ನಮಸ್ತೆ
ಹತ್ತು ವರ್ಷ ನನ್ನನ್ನು ಸಾಕಿ ಸಲುಹಿದ ಹಾಗು ಸಲುಹುತ್ತಿರುವ ಬೆಂಗಳೂರೆಂಬ ಮಹಾ(ಯಾ)ನಗರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ರೈತನಾಗ ಬಯಸಿದ್ದವನನ್ನ ಒಬ್ಬ ಇಂಜಿನಿಯರ್, ಒಬ್ಬ ಅಧ್ಯಾಪಕನನ್ನಾಗಿ ಪರಿವರ್ತಿಸಿದ ಇ-ಊರಿಗೆ ಜೈ ಹೋ.

ನಾನು ಚಿಕ್ಕವನಿದ್ದಗಲಿಂದಲೂ ರೈತನಾಗಬೇಕೆಂಬ ತುಡಿತ ಬಹಳಷ್ಟಿತ್ತು. ಆದರೆ ನನ್ನ ತಾಯಿಯ ಆಸೆಯಂತೆ ಇಂಜಿನಿಯರ್ ಆಗಲು ಹತ್ತನೇ ತರಗತಿ ಮುಗಿಸಿದ ನಂತರ ೧೯೯೯ರ ಆಗಸ್ಟ್ ೨ ರಂದು ಬೆಂಗಳೂರಿಗೆ ಕಾಲಿಟ್ಟಾಗ ಇವನ್ನೊಬ್ಬ ಅಪ್ಪಟ ಹಳ್ಳಿ ಹೈದ( ನನ್ನ ಗೆಳೆಯರಿಗೆ ಹಾಗು ಸಹಪಾಟಿಗಳಿಗೆ ಹಳ್ಳಿ ಗುಗ್ಗು). ಮೊದ ಮೊದಲಿಗೆ ಹಳ್ಳಿಯವನೆಂದು ನನ್ನನ್ನು ಮಾತನಾಡಿಸಲು ಹಿಂಜರಿಯುತ್ತಿದ್ದ ನನ್ನ ಸಹಪಾಟಿಗಳು ನಂತರ ಒಬ್ಬಬರಾಗಿ ಒಳ್ಳೆಯ ಸ್ನೇಹಿತರಾದರು.

ಅಷ್ಟೇನೂ ಬುದ್ಧಿವಂತನಲ್ಲದ ನನ್ನನ್ನು ಬಹಳಷ್ಟು ಶ್ರದ್ದೆ ಮತ್ತು ಆಸಕ್ತಿಯಿಂದ ಬೆಳೆಸಿದ ನನ್ನ ಅಷ್ಟು ಮಂದಿ ಶಿಕ್ಷಕರಿಗೆ ನಾನು ಚಿರಋಣಿ. ದೊರೆತ ಸಾಫ್ಟವೇರ್ಇಂಜಿನಿಯರ್ ಉದ್ಯೋಗವನ್ನು ತ್ಯಜಿಸಿ ಅಧ್ಯಾಪಕ ವೃತ್ತಿಯನ್ನು ಅಯುದುಕೊಳ್ಳಲು ಅದೇ ಕಾರಣ.

ನನ್ನನ್ನು ಪರೋಕ್ಷವಾಗಿ ಮತ್ತು ಪ್ರತ್ಯೆಕ್ಷವಾಗಿ ಬೆಳೆಸಿದ ಎಲ್ಲರಿಗು ನಾನು ಚಿರಋಣಿ.

ಮುಂದೆ ಒಂದು ದಿನ ರೈತನಾಗುವೆನೆಂಬ ಆಶಯದೊಂದಿಗೆ ಜೀವಿಸುತ್ತಿರುವ....

ವಂದೇ ಮಾತರಂ..