Monday, March 9, 2009

ಕನಸು ನನಸಾದ ಕ್ಷಣ.....

ನಮಸ್ತೆ

ಬಹುಷಃ ರವಿ ಬೆಳೆಗೆರೆಯವರ ಪುಸ್ತಕ ಅಥವಾ ಮಾತುಗಳನ್ನು ಕೇಳಿದವರ ಕನಸ್ಸು ಒಂದೆಯಾಗಿರುತ್ತದೆ . ಅದು ಅವರನೊಮ್ಮೆ ಬೇಟಿ ಮಾಡಿ ಅವರೊಂದಿಗೆ ಒಂದು ಕಪ್ ಟೀ ಕುಡಿದು, ಒಂದಷ್ಟು ಹರಟೆ ಒಡೆಯುವುದು... ಅಂದು ಭಾನುವಾರ ಬೆಳಿಗ್ಗೆ ಗ್ರಂಥಾಲಯಕ್ಕೆ ಬೇಟಿ ಕೊಟ್ಟಾಗ ನನ್ನ ಕೈಗೆ ಮೊದಲು ಸಿಕ್ಕಿದ್ದು "ಹಾಯ್ ಬೆಂಗಳೂರು" ಪತ್ರಿಕೆ. ಅದರಲ್ಲಿ ನನ್ನಗೊಂದು ಆಶ್ಚರ್ಯ ಹಾಗು ಸಂತೋಷ ಎರಡು ಒಟ್ಟಿಗೆ ಕಾದಿದ್ದವು , ರವಿ ಅಣ್ಣನ ಅಷ್ಟು ಪುಸ್ತಕಗಳ ಮೇಲೆ ಭಾರಿ ರಿಯಾಯತಿ ಹಾಗು ಅಣ್ಣನ ಜೊತೆ ಕುಳಿತು ಕಾಫಿ ಕುಡಿಯುವ ಅವಕಾಶ... ನಾನು ಬಿಟ್ಟೆನೆ ಇಂತಹ ಅವಕಾಶವನ್ನು...
ಅಂದು ಬುಧವಾರ ಸಂಜೆ ಕಾಲೇಜು ಮುಗಿಸಿಕೊಂಡು ಹೊರಟಿದ್ದು ನೇರ ಪದ್ಮನಾಭನಗರದಲ್ಲಿರುವ ಅಣ್ಣನ ಕಚೇರಿಗೆ... ನಾನು ಹೋದಾಗ ಅಣ್ಣ ಏನೋ ಬರೆಯುತಿದ್ದ.. ಸ್ವಲ್ಪ ಸಮಯದ ನಂತರ ನನನ್ನು ಹೊಳಗೆ ಕರೆಯಿಸಿಕೊಂಡು ಮಾತನಾಡಿಸಿ ಒಂದು ಪುಸ್ತಕಕ್ಕೆ ಸಹಿ ಹಾಕಿ ಕಳಿಸಿಕೊಟ್ಟಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ನನ್ನ ಕೋರಿಕೆಯಂತೆ ಜೊತೆಯಲ್ಲಿ ಒಂದು ಫೋಟೋ ಕ್ಲಿಕ್ಕಿಸಿಕೊಂಡು , ತನ್ನ ಮನೆಯ ವಿಳಾಸವನ್ನು ಕೊಡುವಂತೆ ಆಫೀಸ್ ಹುಡಿಗಿಗೆ ಹೇಳಿ ನನ್ನನು ಕಳುಹಿಸಿಕೊಟ್ಟರು. ಅಲ್ಲಿಂದ ನಾನು ನೇರ ಅಣ್ಣನ ಮನೆಗೆ ಹೊರಟೆ. ಅವರ ಮಾವನವರಾದ ಶ್ರೀಯುತ ಪೂಜ್ಯಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಯವರು ಮನೆಯಲ್ಲಿ ಇದ್ದರು. ಅವರೆಂದರೆ ನನಗೆ ಪಂಚಪ್ರಾಣ... ಅವರೊಂದಿಗೆ ಎರಡು ಗಂಟೆಗಳ ಕಾಲ ಹರಟೆ ಹೊಡೆದು ಮನೆಗೆ ಹೊರಟಾಗ ಏನೋ ಕಂಡರಿಯದ ಅನುಭವ, ಸಂತೋಷ, ಸಡಗರ, ಆನಂದ. ಜೀವನ ಧನ್ಯ ಅನ್ನೋ ಭಾವನೆ ...

ರವಿ ಅಣ್ಣನೊಂದಿಗೆ

ಪೂಜ್ಯ ಶ್ರೀ ಕೃಷ್ಣ ಶಾಸ್ತ್ರಿಗಳೊಂದಿಗೆ