ಅಂದು ಶನಿವಾರ ೪ನೆ ಜನವರಿ ಅರ್.ವಿ. ಟೀಚೆರ್ಸ್ ಕಾಲೇಜ್ ನ ಸಭಾಂಗಣದಲ್ಲಿ ನಡೆದ "ಯುವ ದಿನ "ವನ್ನು ಯೂತ್ ಫಾರ್ ಸೇವಾ ತಂಡವು ಆಯೋಜಿಸಿತ್ತು. ಬಹಳ ದಿನಗಳಿಂದ ಚಕ್ರವರ್ತಿ ಅಣ್ಣನ (ಚಕ್ರವರ್ತಿ ಸೂಲಿಬೆಲೆ) ಮಾತುಗಳನ್ನು ಕೇಳಲು ಹತೋರೆಯುತದ್ದ ನನಗೆ ಆ ಸೌಭಾಗ್ಯ ದೊರೆಯಿತು. ಅಂದು ಅಣ್ಣ ಒಂದು ತಾಸಿನಲ್ಲಿ "ಸ್ವಾಮಿ ವಿವೇಕಾನಂದರ " ಜೀವನವನ್ನು ಮನ ಮುಟ್ಟುವಂತೆ ಸಂಕ್ಷಿಪ್ತವಾಗಿ ಹೇಳಿ ಮುಗಿಸಿದಾಗ ಎಲ್ಲರ ಕಣ್ಣುಗಳು ತೇವವಾಗಿದ್ದವು.