Tuesday, June 2, 2009

ವಿದ್ಯಾರ್ಥಿಗಳೊಂದಿಗೆ ಸತ್ಯಹರಿಶ್ಚಂದ್ರ....

ನಮಸ್ತೆ

ಮೊನ್ನೆ ಶನಿವಾರ(೩೦-ಮೇ-೦೯) ಈಶ್ವರಿ ಚಿತ್ರಮಂದಿರದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಯಾವುದೊ ಸಂಘ ಸಂಸ್ಥೆಯೊಂದು "ಸತ್ಯಹರಿಶ್ಚಂದ್ರ" ಚಿತ್ರವನ್ನು ಪ್ರದರ್ಶಿಸಲಾಯಿತು.ಕಪ್ಪು-ಬಿಳುಪು ಅವತರಿನಿಕೆಯಲ್ಲಿ ಹಲವಾರು ಬಾರಿ ನೋಡಿದ್ದರು ಈ ಬಾರಿ ಬಣ್ಣದ ಅವತರಿನಿಕೆಯಲ್ಲಿ ನೋಡುವ ಅವಕಾಶ ಕಲ್ಪಿಸಿಕೊಟ್ಟ ಸಂಸ್ಥೆಗೆ ನಾನು ಚಿರಋಣಿ..
ಬೆಳ್ಳಿಗ್ಗೆ ೮:೦೦ ಗಂಟೆಗೆ ಪ್ರದರ್ಶನ ಇದ್ದುದರಿಂದ ಬಹುಶ: ಹುಡುಗರ ಸಂಖ್ಯೆ ಕಡಿಮೆ ಇರಬಹುದೆಂದು ಊಹಿಸಿದ್ದ ನನಗೆ ಆಶ್ಚರ್ಯ ಕಾದಿತ್ತು. ಅಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಿದ್ದರು..
ಚಿತ್ರ ಶುರುಅದಗಲಿಂದಲೂ ನಮ್ಮ ಹುಡುಗರ ಅಬ್ಬರ, ಚೀರಾಟ, ಶಿಳ್ಳೆಗಳಿಗೆ ಕೊನೆಯಿರಲಿಲ್ಲ. "ಕುಲದಲ್ಲಿ ಕೀಳ್ಯಾವುದೋ" ಹಾಡು ಶುರುವಾದಾಗಲಂತೂ ಅಬ್ಬಬ್ಬಾ, ಕುಣಿಥವೋ ಕುಣಿತ...




ವಂದೇ ಮಾತರಂ

2 comments:

  1. ನವೀನ್,

    ನಾನು ಚಿಕ್ಕಂದಿನಲ್ಲಿ "ನಾಗರಹೊಳೆ, ತಬ್ಬಲಿ ನೀನಾದೆ ಮಗನೆ, ಇತ್ಯಾದಿ ಸಿನಿಮಾಗಳನ್ನು ವಿಧ್ಯಾರ್ಥಿಯಾಗಿದ್ದಾಗ ನೋಡಿದ್ದೇನೆ. ಶಾಲೆಯಲ್ಲಿ ಬೆಳಿಗ್ಗೆ ಕರೆದುಕೊಂಡು ಹೋಗುತ್ತಿದ್ದರು. ಅದನ್ನು ನೆನಪಾಯಿತು.

    ReplyDelete
  2. ನಿಜ ಶಿವಣ್ಣ.. ನಿಮ್ಮ ಕಾಮೆಂಟ್ ಓದಿದ ಮೇಲೆ ಯಾಕೋ ನನ್ನ ಬಾಲ್ಯಕ್ಕೆ ಸಂಬಂಧಿಸಿದ ಒಂದು ಲೇಖನ ಬರೆಯ ಬೇಕೆನಿಸಿತು....

    ReplyDelete