Wednesday, May 27, 2009

ಒಂದು ಶೂ ಸುತ್ತ ಸುತ್ತುವ ಒಂದು ಅದ್ಭುತ ಚಲನಚಿತ್ರ....

ನಮಸ್ತೆ
ಇತ್ತಿಚಿನ ದಿನಗಳಲ್ಲಿ ಶೂಗಳು, ಬುಷ್ ನಿಂದ ಇಡಿದು ನಮ್ಮ ರಾಜಕಾರಣಿಗಳಿಗೆ ನಿದ್ದೆ ಕೆಡಿಸುತ್ತಿರುವ ವಿಚಾರ ತಿಳಿದೆ ಇದೆ. ಆದರೆ ಅದೇ ಶೂ ಅನ್ನು ಕಥಾವಸ್ತುವಗಿರಿಸಿಕೊಂಡು ಒಂದು ಅರ್ಥ ಪೂರ್ಣವಾದ ಚಿತ್ರವನ್ನ ಇರಾನಿನ ನಿರ್ದೇಶಕ ಮಜಿದ್ ಮಜಿದ್ಹಿ ಯವರು ತೆಗೆದಿದ್ದಾರೆ. children of heaven ಎಂಬ ಶೀರ್ಷಿಕೆ.
ಇರಾನಿನ ಒಂದು ಸಣ್ಣ ಬಡ ಕುಟುಂಬ. ತಂಗಿಯ ಹರಿದ ಶೂ ಅನ್ನು ಅಣ್ಣ ಹೊಲಿಸಲು ತೆಗೆದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಕಳೆದುಕೊಂಡು ಮನೆಗೆ ಹಿಂತಿರುಗುತ್ತಾನೆ. ಮನೆಯಲ್ಲಿ ಹೊಸ ಶೂ ಕೊಳ್ಳಲು ಹಣವಿಲ್ಲ ವೆಂದರಿತು ಅಣ್ಣನ ಶೂವನ್ನೇ ತಂಗಿಯು ಬಳಿಸಲು ನಿರ್ದದರಿಸುತ್ತಾರೆ. ತಂಗಿಗೆ ಬೆಳ್ಳಿಗೆ ಶಾಲೆ, ಅಣ್ಣನಿಗೆ ಮದ್ಯನದ ಶಾಲೆ. ಆದರಿಂದ ಶಾಲೆ ಮುಗಿದ ತಕ್ಷಣ ತಂಗಿ ಓಡುತ್ತ ಬಂದು ಅಣ್ಣನಿಗೆ ಶೂ ರವಾನಿಸಬೇಕು. ಈ ಮದ್ಯೆ ಬರುವ ಸನ್ನಿವೇಶಗಳನ್ನು ನೀವೇ ನೋಡಿ ಅನುಭವಿಸಬೇಕು.
ಎಲ್ಲರು ನೋಡಲೇಬೇಕಾದ ಒಂದು ಅರ್ಥಪೂರ್ಣ ಚಲನಚಿತ್ರ...


ವಂದೇ ಮಾತರಂ

Monday, May 25, 2009

ನಮ್ಮ ಜೋಗಿಯ ಪುಸ್ತಕ ಬಿಡುಗಡೆ...


ನಮಸ್ತೆ
ಭಾನುವಾರ ನಮ್ಮ ಕನ್ನಡ ಭವನದಲ್ಲಿ ಮೆಚ್ಚಿನ ಲೇಖಕರಾದ ಶ್ರೀ ಜೋಗಿಯವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನ ಅಂಕಿತ ಪ್ರಕಾಶನದವರು ಹಮ್ಮಿಕೊಂಡಿದ್ದರು. ಕಾರ್ಯಕ್ರಮ್ಮಕ್ಕೆ ಮೆರುಗು ನೀಡಲು ಅನೇಕ ಗಣ್ಯಥಿ ಗಣ್ಯರು ಉಪಸ್ತಿತರಿದ್ದರು. ಶ್ರೀ ಹಂಸಲೇಖ, ಶ್ರೀ ತ.ನ. ಸೀತಾರಾಂ, ಶ್ರೀ ವಿಶ್ವೇಶ್ವರ ಭಟ್, ಶ್ರೀ ಶಿವಮೊಗ್ಗ ಸುಬ್ಬಣ್ಣ, ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಶ್ರೀ ಮೋಹನ್, ಶ್ರೀ ಗೋಪಾಲಕೃಷ್ಣ ಕುಂಟಿನಿ ಅವರಲ್ಲಿ ಕೆಲವರು.
ಶ್ರೀ ಜೋಗಿ (ಗಿರೀಶ್ ರಾವ್) ರವರ "ಚಿಟ್ಟೆ ಹೆಜ್ಜೆ ಜಾಡು" ಪುಸ್ತಕ ಬಿಡುಗಡೆ ಮಾಡಿದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ರವರು, ಅರ್ಥಿಕ ಹಿಂಜರಿತದಿಂದ ಜರ್ಜರಿತವಾದ ನಗರ ಜೀವನದ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತ ಪುಸ್ತಕದ ಬಗ್ಗೆ ಕೆಲವು ಮಾತಾಡಿದರು. ನಂತರ ಜೋಗಿರವರ "ಜೋಗಿಯ ಕಥೆಗಳು" ಪುಸ್ತಕ ಬಿಡುಗಡೆ ಮಾಡಿದ ಶ್ರೀ ಹಂಸಲೇಖ ರವರು, ತಿಳಿ ಹಾಸ್ಯದೊಂದಿಗೆ ಸಭೆಯನ್ನ ರಂಜಿಸಿದರು. ಶ್ರೀ ಗೋಪಾಲಕೃಷ್ಣ ಕುಂಟಿನಿ ರವರು ಮಾತನಾಡುತ್ತ ತಮ್ಮ ಮತ್ತು ಜೋಗಿಯವರ ಬಾಲ್ಯದಿನಗಳ ಸವಿಯನ್ನ ನಮ್ಮೊಂದಿಗೆ ಹಂಚಿಕೊಂಡರು.
ಬ್ಲಾಗ್ ಗೆಳೆಯರಾದ ಶಿವಣ್ಣ , ಮಲ್ಲಿಕಾರ್ಜುನ ಅಣ್ಣ , ಪರಾಂಜಪೆ ಸರ್, ಶಾಮಕ್ಕ, ಪ್ರಕಾಶಣ್ಣ, ವಿಕಾಸ್ ರವರ ಬೇಟಿ ಮನಸ್ಸಿಗೆ ಏನೋ ಒಂದು ತರಹದ ಖುಷಿ ನೀಡಿತು. ಎಂದಿನಂತೆ ಕೆಲವು ಗಣ್ಯರ ಹಸ್ತಾಕ್ಷರ ಪಡೆದು ಕೆಲವು ಗಣ್ಯರೊಂದಿಗೆ ಫೋಟೋ ಕ್ಲಿಕಿಸಿಕೊಂಡ ನಂತರ ಪುಸ್ತಕ ಖರಿದಿಸಿ ಎಲ್ಲರಿಗು ವಂದಿಸಿ ಅಮಿತನಂದದಿಂದ ಮಾಯವಾದೆ.
ಶೀ ಮೋಹನ್, ಶ್ರೀ ಹಂಸಲೇಖ, ಶೀ ಜೋಗಿ, ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಶ್ರೀ ಗೋಪಾಲ ಕೃಷ್ಣ ಕುಂಟಿನಿ,
ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ರೊಂದಿಗೆ

ಶ್ರೀ T.N. ಸೀತಾರಾಂ ರೊಂದಿಗೆ,

ಶ್ರೀ ಹಂಸಲೇಖ ರೊಂದಿಗೆ
ವಂದೇ ಮಾತರಂ

Thursday, May 21, 2009

ಹಳೆ ವಿದ್ಯಾರ್ಥಿಗಳ ಮಿಲನಕೂಟ

ನಮಸ್ತೆ




ವೇಮನ ತಾಂತ್ರಿಕ ಮಹಾವಿದ್ಯಾಲಯ... ನಾನು ಓದಿದ ವಿದ್ಯಾ ಸಂಸ್ಥೆ.. ಹತ್ತನೆ ತರಗತಿಯಲ್ಲಿ ಎರಡನೇ ದರ್ಜೆಯೊಂದಿಗೆ ತೇರ್ಗಡೆಗೊಂಡು, ಆಗು-ಹೀಗೂ ಡಿಪ್ಲೋಮಾ ಮುಗಿಸಿ, ಇಂಜಿನಿಯರಿಂಗ್ ಪದವಿ ಪಡೆಯಲು ಪ್ರವೇಶ ಪಡೆದು ನಾನೆ ನಂಬಲು ಅಸಾಧ್ಯವಾದ ಪ್ರಗತಿಗೆ( ಉನ್ನತ ಪದವಿಯಲ್ಲಿ ವಿಶ್ವವಿದ್ಯನಿಲಯಕ್ಕೆ ಮೊದಲ ಸ್ಥಾನ) ಹಾಗು ನನ್ನಲ್ಲಿ ಜೀವನದ ಮೌಲ್ಯಗಳನ್ನ ತುಂಬಿ ಅಪೂರ್ವ ಬದಲಾವಣೆಗೆ ಕಾರಣವಾದ ವಿದ್ಯಾ ಸಂಸ್ಥೆ...


ಕಬ್ಬಿಣದ ಕಡಲೆಯಂತಿದ್ದ ಗಣಿತವನ್ನ ಬಹಳಷ್ಟು ಶ್ರದ್ದೆಯಿಂದ ಕಲಿಸಿದ ಶ್ರೀ ಸುರೇಶ್ ಸರ್, ಶ್ರೀ ಕೆಂಪೇಗೌಡ ಸರ್. ನನ್ನಲ್ಲಿ ಸಮಯಪ್ರಜ್ಞೆಯನ್ನ ಬೆಳೆಸಿದ ಶ್ರೀಮತಿ ಗೀತ ಮೇಡಂ, ನನ್ನಲ್ಲಿನ ನಾಯಕತ್ವ ಗುಣವನ್ನ ಬಯಲಿಗೆಳೆದ ಶ್ರೀ ಪ್ರಚೆತ್ ಸರ್, ನನ್ನನ್ನು ಸಮಾಜ ಸೇವಾ ಕಾರ್ಯ ಗಳ್ಳಲ್ಲಿ ತೊಡಗಲು ಬೆಂಬಲಿಸಿದ ನನ್ನ ಸಹಪಾಟಿಗಳು, ಹಿರಿಯರ ಸ್ತಾನದಲ್ಲಿ ನಿಂತು ನನ್ನ ಎಲ್ಲ ಚಟುವಟಿಕೆಗಳಿಗೆ ಬೆಂಬಲಿಸಿದ ನಮ್ಮ ಪ್ರಾಂಶುಪಾಲರಾದ ಶ್ರೀ ಡಾ. ರಂಗ ಮತ್ತು ಶ್ರೀ ಡಾ. ಯೆಲ್ಲ ರೆಡ್ಡಿ, ನನಗೆ ಪುಸ್ತಕ ಓದುವ ಗೀಳನ್ನ ಹತ್ಹಿಸಿದ ನಮ್ಮ ಗ್ರಂಥಪಾಲಕರಾದ ಶ್ರೀ ಅಶೋಕ್, ಶ್ರೀ ಮುರಳಿ, ಶ್ರೀ ಮೋಹನ್ ರವರಿಗೆ ನಾನು ಚಿರಋಣಿ...


ಇಷ್ಟೆಲ್ಲ ಮಾತಾಡಿದ್ದು ಮೊನ್ನೆ(20-May-2009) ನಡೆದ ನಮ್ಮ ಕಾಲೇಜಿನ ಹಳೆ ವಿದ್ಯರ್ಥಿಗಳ ಮಿಲನ ಕೂಟದಲ್ಲಿ. ತುಂಬ ಬಾವುಕನಾಗಿ ಮಾತಾಡಿದ್ದು ಅದೇ ಮೊದಲು. ನಾನು ವಿದ್ಯಾಬ್ಯಾಸ ಪಡೆದ ಸಂಸ್ಥೆ ಮತ್ತಷ್ಟು ಎತ್ಹರಕ್ಕೆ ಏರಲಿ ಏನ್ನುವುದೇ ನನ್ನ ಆಸೆ...


ವಂದೇ ಮಾತರಂ...

Monday, April 27, 2009

ಅಮ್ಮ(ಮಣಿಕಾಂತ್) ಹೇಳಿದ ಎಂಟು ಸುಳ್ಳುಗಳು..

ನಮಸ್ತೆ

ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಷ್ಟು ಚೆನ್ನಾಗಿ ಮುಡಿಬರುವುದೆಂದು ನಾನು ಕನಸಿನಲ್ಲೂ ನೆನೆದಿರಲಿಲ್ಲ. ಆ ರೀತಿ ಇತ್ತು ಮಣಿಕಾಂತ್ ಅಣ್ಣನ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕ ಬಿಡುಗಡೆ ಕಾರ್ಯಕ್ರಮ. ಅಣ್ಣನ ಆಮಂತ್ರಣ ಪತ್ರಿಕೆ ಮೇಲ್ ಮುಖಾಂತರ ನನಗೆ ತಲುಪಿದ ದಿನದಂದೇ ನಾನು ಆ ದಿನವನ್ನ ಕಾರ್ಯಕ್ರಮಕ್ಕೆ ಮಿಸಲಿಟ್ಟೆ....

ಕಾರ್ಯಕ್ರಮ ೧೧ ಗಂಟೆಗೆ ಇದ್ದರೂ ನನ್ನ ಪ್ರೀತಿಯ ನಟ ಪ್ರಕಾಶಣ್ಣನ ನೋಡುವ ಆಸೆಯಿಂದ ೯.೩೦ ಕೆಲ್ಲ ಕಲಾಕ್ಷೇತ್ರದಲ್ಲಿ ಹಾಜರಿದ್ದೆ. ಜೊತೆಗೆ ನಾನು ಇಷ್ಟಪಡುವಂಥಹ ಫೋಟೋಗ್ರಾಫರ್ ಮಲ್ಲಿಕರ್ಜುನರವರ ಬೇಟಿ ಆದದ್ದು ನಿಜಕ್ಕೂ ನಾನು ಅದೃಷ್ಟವಂತ ಅನ್ನೋದನ್ನ ಮತೊಮ್ಮೆ ಸಾಬಿತು ಪಡಿಸಿತು. ಅಂತಾರಾಷ್ಟ್ರೀಯ ಖ್ಯಾತಿಯಾ ಫೋಟೋಗ್ರಾಫರ್ ಜೊತೆಯಲ್ಲ ನಾನು ಮಾತಾಡಿದ್ದು ಎನ್ನುವಷ್ಟು ಸರಳ ವ್ಯಕ್ತಿ ಮಲ್ಲಿ...

ನಂತರ ರವಿಯಣ್ಣ, ವಿಶ್ವೇಶ್ವರ್ ಭಟ್, ಕೃಷ್ಣೆ ಗೌಡರ ಆಗಮನ. ಎಲ್ಲ ತಮ್ಮ ತಮ್ಮ ವೃತಿಯಲ್ಲಿ ದಿಗ್ಗಜರೆ.. ಕಾರ್ಯಕ್ರಮ ಶುರು ಆಗಿದು ಉಪಾಸನ ತಂಡದವರ ಸುಮಧುರ ಹಾಡುಗಳೊಂದಿಗೆ... ಇನ್ನು ಮಣಿಕಾಂತರವರು ಮಾತ್ರ ಈ ಕಾರ್ಯಕ್ರಮ ತನ್ನದಲ್ಲವೇನೋ ಅನ್ನೋ ರೀತಿಯಲ್ಲಿ ಓಡಾಡಿಕೊಂಡಿದ್ದು ನೋಡಿ ನನಗೆ ಆಶ್ಚರ್ಯ.

ಮೊದಲಿಗೆ ಕೃಷ್ಣೆ ಗೌಡರಿಂದ ಪುಸ್ತಕದ ವಿಮರ್ಶೆ ತುಂಬ ಸೊಗಸಾಗಿ ಮೂಡಿಬಂತು. ನಂತರ ಮಣಿಕಾಂತರವರು ತುಂಬ ಭಾವುಕರಾಗಿ ತಮಗೆ ಕನ್ನಡ ಕಲಿಸಿದ ಶಿಕ್ಷಕರನ್ನ ಅಭಿನಂದಿಸಿದ್ದು ಮಣಿಕಾಂತರ ಮೇಲಿದ್ದ ಅಭಿಮಾನವನ್ನ ಮತ್ತಷ್ಟು ಗಟ್ಟಿಗೊಳಿಸಿತು. ಅನಂತರ ರವಿಯಣ್ಣ ಎಂದಿನಂತೆ ಅಪ್ಪ-ಮಕ್ಕಳ ಮೇಲೆ ಒಂದಷ್ಟು ನಗೆ ಚಟಾಕಿ ಹರಿಸಿ ತಮ್ಮ ಹಾಗು ಮಣಿಕಾಂತರ ಸಂಬಂದವನ್ನ ತಿಳಿಸುತ್ತ ತಾಯಿ-ಮಕ್ಕಳ ಸಂಬಂಧ ಹೇಗಿರಬೇಕೆಂದು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು... ಪ್ರಕಾಶಣ್ಣ ಮಾತಾಡುತ್ತ ಅವರಿಗೂ ಬೆಂಗಳುರಿಗೂ ಇರುವ ಸಂಬಂದವನ್ನ ತುಂಬಾ ಭಾವುಕರಾಗಿ ವ್ಯಕ್ತಪಡಿಸಿದರು. ಭಾವುಕತೆ ತುಂಬಿದ್ದ ಆ ಕಾರ್ಯಕ್ರಮದಲ್ಲಿ ಭಟ್ಟರು ಸಹ ಇನ್ನಷ್ಟು ಭಾವುಕರಾಗಿ ತಮ್ಮ ಮತ್ತು ಮಣಿಕಾಂತರ ಒಡನಾಟವನ್ನ ತಿಳಿಸಿಕೊಟ್ಟು ಮಣಿಕಾಂತ್ ರವರಿಗೆ ಸಭೆಯ ಎದುರಲ್ಲೇ ಎರಡು ಕೈಯಿಂದ ನಮಸ್ಕಾರ ಮಾಡಿದ್ದು ನಿಜವಾಗಿಯು ನನ್ನ ಕಣ್ಣುಗಳ್ಳನ್ನು ತೇವಗೊಳಿಸಿದ್ದವು...
ಪುಸ್ತಕ ಕೊಂಡು ಎಲ್ಲರ ಹಸ್ತಾಕ್ಷರ ಪಡೆದು, ಮಲ್ಲಿಕಾರ್ಜುನರನ್ನ ವಂಧಿಸಿ ಕಲಾಕ್ಷೇತ್ರದಿಂದ ಹೊರ ನಡೆದಾಗ ಅದಂಥಹ ಸಂತೋಷ, ಸಂಭ್ರಮ ವರ್ಣಿಸಲು ಆಗದು ...



ಪ್ರಕಾಶಣ್ಣನೊಂದಿಗೆ

ಪುಸ್ತಕ ಬಿಡುಗಡೆ
ಎಡದಿಂದ ಬಲಕ್ಕೆ: ಶ್ರೀ ಉಪಾಸನ ಮೋಹನ್ , ಶ್ರೀ ಕೃಷ್ಣೆ ಗೌಡ, ಶ್ರೀ ಪ್ರಕಾಶ್ ರೈ, ಶ್ರೀ ರವಿ ಬೆಳೆಗೆರೆ, ಶ್ರೀ ವಿಶ್ವೇಶ್ವರ್ ಭಟ್ಟ್, ಶ್ರೀ ಮಣಿಕಾಂತ್,ಶ್ರೀಮತಿ ನಾಗರತ್ನ ಮಣಿಕಾಂತ್

ಅಂತಾರಾಷ್ಟ್ರೀಯ ಖ್ಯಾತಿಯಾ ಫೋಟೋಗ್ರಾಫರ್ ಮಲ್ಲಿಕಾರ್ಜುನರೊಂದಿಗೆ


ವಂದೇ ಮಾತರಂ...

Thursday, April 16, 2009

ನನ್ನ ಅಜ್ಜನವರಿಗೆ ಭಾವಪೂರ್ಣ ನಮನ

ನಮಸ್ತೆ

ನನ್ನ ಪಾಲಿನ ದೈವಾಂಶ ಸಂಭೂಥರು ಆದ ನನ್ನ ಪ್ರೀತಿಯ ಹಾಗು ಪೂಜ್ಯನಿಯರಾದ ನನ್ನ ಅಜ್ಜನವರಿಗೆ ನನ್ನ ಭಾವಪೂರ್ಣ ನಮನಗಳು. ನನ್ನ ಜೀವನವನ್ನ ತುಂಬ ಅಸ್ಥೆಯಿಂದ ತೀಡಿ ತಿದ್ದಿದಂಥಹವರು ನನ್ನ ಅಜ್ಜ. ನನ್ನ ಪಾಲಿನ ಹೀರೋ ಕೂಡ . ಹಣಕ್ಕಿಂತ ಜನ ಮುಖ್ಯ, ಮನೆಗಿಂತ ಊರು ಮುಖ್ಯ ಅನ್ನೋ ರೀತಿ ತನ್ನ ೮೪ ವರ್ಷಗಳ ಜೀವನವನ್ನ ಸವಿದರು. ಇತೀಚಿಗೆ ಅನಾರೋಗ್ಯದಿಂದ ಬಳಲಿ ಸ್ವರ್ಗಸ್ಥರಾದರು. ದೇಹ ಮಾತ್ರ ನಮ್ಮನಗಲಿದೆ, ಆದರೆ ಅವರ ಚಿಂತನೆಗಳು ಸದಾ ನಮ್ಮೊಡನೆ....

Monday, March 9, 2009

ಕನಸು ನನಸಾದ ಕ್ಷಣ.....

ನಮಸ್ತೆ

ಬಹುಷಃ ರವಿ ಬೆಳೆಗೆರೆಯವರ ಪುಸ್ತಕ ಅಥವಾ ಮಾತುಗಳನ್ನು ಕೇಳಿದವರ ಕನಸ್ಸು ಒಂದೆಯಾಗಿರುತ್ತದೆ . ಅದು ಅವರನೊಮ್ಮೆ ಬೇಟಿ ಮಾಡಿ ಅವರೊಂದಿಗೆ ಒಂದು ಕಪ್ ಟೀ ಕುಡಿದು, ಒಂದಷ್ಟು ಹರಟೆ ಒಡೆಯುವುದು... ಅಂದು ಭಾನುವಾರ ಬೆಳಿಗ್ಗೆ ಗ್ರಂಥಾಲಯಕ್ಕೆ ಬೇಟಿ ಕೊಟ್ಟಾಗ ನನ್ನ ಕೈಗೆ ಮೊದಲು ಸಿಕ್ಕಿದ್ದು "ಹಾಯ್ ಬೆಂಗಳೂರು" ಪತ್ರಿಕೆ. ಅದರಲ್ಲಿ ನನ್ನಗೊಂದು ಆಶ್ಚರ್ಯ ಹಾಗು ಸಂತೋಷ ಎರಡು ಒಟ್ಟಿಗೆ ಕಾದಿದ್ದವು , ರವಿ ಅಣ್ಣನ ಅಷ್ಟು ಪುಸ್ತಕಗಳ ಮೇಲೆ ಭಾರಿ ರಿಯಾಯತಿ ಹಾಗು ಅಣ್ಣನ ಜೊತೆ ಕುಳಿತು ಕಾಫಿ ಕುಡಿಯುವ ಅವಕಾಶ... ನಾನು ಬಿಟ್ಟೆನೆ ಇಂತಹ ಅವಕಾಶವನ್ನು...
ಅಂದು ಬುಧವಾರ ಸಂಜೆ ಕಾಲೇಜು ಮುಗಿಸಿಕೊಂಡು ಹೊರಟಿದ್ದು ನೇರ ಪದ್ಮನಾಭನಗರದಲ್ಲಿರುವ ಅಣ್ಣನ ಕಚೇರಿಗೆ... ನಾನು ಹೋದಾಗ ಅಣ್ಣ ಏನೋ ಬರೆಯುತಿದ್ದ.. ಸ್ವಲ್ಪ ಸಮಯದ ನಂತರ ನನನ್ನು ಹೊಳಗೆ ಕರೆಯಿಸಿಕೊಂಡು ಮಾತನಾಡಿಸಿ ಒಂದು ಪುಸ್ತಕಕ್ಕೆ ಸಹಿ ಹಾಕಿ ಕಳಿಸಿಕೊಟ್ಟಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ನನ್ನ ಕೋರಿಕೆಯಂತೆ ಜೊತೆಯಲ್ಲಿ ಒಂದು ಫೋಟೋ ಕ್ಲಿಕ್ಕಿಸಿಕೊಂಡು , ತನ್ನ ಮನೆಯ ವಿಳಾಸವನ್ನು ಕೊಡುವಂತೆ ಆಫೀಸ್ ಹುಡಿಗಿಗೆ ಹೇಳಿ ನನ್ನನು ಕಳುಹಿಸಿಕೊಟ್ಟರು. ಅಲ್ಲಿಂದ ನಾನು ನೇರ ಅಣ್ಣನ ಮನೆಗೆ ಹೊರಟೆ. ಅವರ ಮಾವನವರಾದ ಶ್ರೀಯುತ ಪೂಜ್ಯಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಯವರು ಮನೆಯಲ್ಲಿ ಇದ್ದರು. ಅವರೆಂದರೆ ನನಗೆ ಪಂಚಪ್ರಾಣ... ಅವರೊಂದಿಗೆ ಎರಡು ಗಂಟೆಗಳ ಕಾಲ ಹರಟೆ ಹೊಡೆದು ಮನೆಗೆ ಹೊರಟಾಗ ಏನೋ ಕಂಡರಿಯದ ಅನುಭವ, ಸಂತೋಷ, ಸಡಗರ, ಆನಂದ. ಜೀವನ ಧನ್ಯ ಅನ್ನೋ ಭಾವನೆ ...

ರವಿ ಅಣ್ಣನೊಂದಿಗೆ

ಪೂಜ್ಯ ಶ್ರೀ ಕೃಷ್ಣ ಶಾಸ್ತ್ರಿಗಳೊಂದಿಗೆ