Monday, May 25, 2009

ನಮ್ಮ ಜೋಗಿಯ ಪುಸ್ತಕ ಬಿಡುಗಡೆ...


ನಮಸ್ತೆ
ಭಾನುವಾರ ನಮ್ಮ ಕನ್ನಡ ಭವನದಲ್ಲಿ ಮೆಚ್ಚಿನ ಲೇಖಕರಾದ ಶ್ರೀ ಜೋಗಿಯವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನ ಅಂಕಿತ ಪ್ರಕಾಶನದವರು ಹಮ್ಮಿಕೊಂಡಿದ್ದರು. ಕಾರ್ಯಕ್ರಮ್ಮಕ್ಕೆ ಮೆರುಗು ನೀಡಲು ಅನೇಕ ಗಣ್ಯಥಿ ಗಣ್ಯರು ಉಪಸ್ತಿತರಿದ್ದರು. ಶ್ರೀ ಹಂಸಲೇಖ, ಶ್ರೀ ತ.ನ. ಸೀತಾರಾಂ, ಶ್ರೀ ವಿಶ್ವೇಶ್ವರ ಭಟ್, ಶ್ರೀ ಶಿವಮೊಗ್ಗ ಸುಬ್ಬಣ್ಣ, ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಶ್ರೀ ಮೋಹನ್, ಶ್ರೀ ಗೋಪಾಲಕೃಷ್ಣ ಕುಂಟಿನಿ ಅವರಲ್ಲಿ ಕೆಲವರು.
ಶ್ರೀ ಜೋಗಿ (ಗಿರೀಶ್ ರಾವ್) ರವರ "ಚಿಟ್ಟೆ ಹೆಜ್ಜೆ ಜಾಡು" ಪುಸ್ತಕ ಬಿಡುಗಡೆ ಮಾಡಿದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ರವರು, ಅರ್ಥಿಕ ಹಿಂಜರಿತದಿಂದ ಜರ್ಜರಿತವಾದ ನಗರ ಜೀವನದ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತ ಪುಸ್ತಕದ ಬಗ್ಗೆ ಕೆಲವು ಮಾತಾಡಿದರು. ನಂತರ ಜೋಗಿರವರ "ಜೋಗಿಯ ಕಥೆಗಳು" ಪುಸ್ತಕ ಬಿಡುಗಡೆ ಮಾಡಿದ ಶ್ರೀ ಹಂಸಲೇಖ ರವರು, ತಿಳಿ ಹಾಸ್ಯದೊಂದಿಗೆ ಸಭೆಯನ್ನ ರಂಜಿಸಿದರು. ಶ್ರೀ ಗೋಪಾಲಕೃಷ್ಣ ಕುಂಟಿನಿ ರವರು ಮಾತನಾಡುತ್ತ ತಮ್ಮ ಮತ್ತು ಜೋಗಿಯವರ ಬಾಲ್ಯದಿನಗಳ ಸವಿಯನ್ನ ನಮ್ಮೊಂದಿಗೆ ಹಂಚಿಕೊಂಡರು.
ಬ್ಲಾಗ್ ಗೆಳೆಯರಾದ ಶಿವಣ್ಣ , ಮಲ್ಲಿಕಾರ್ಜುನ ಅಣ್ಣ , ಪರಾಂಜಪೆ ಸರ್, ಶಾಮಕ್ಕ, ಪ್ರಕಾಶಣ್ಣ, ವಿಕಾಸ್ ರವರ ಬೇಟಿ ಮನಸ್ಸಿಗೆ ಏನೋ ಒಂದು ತರಹದ ಖುಷಿ ನೀಡಿತು. ಎಂದಿನಂತೆ ಕೆಲವು ಗಣ್ಯರ ಹಸ್ತಾಕ್ಷರ ಪಡೆದು ಕೆಲವು ಗಣ್ಯರೊಂದಿಗೆ ಫೋಟೋ ಕ್ಲಿಕಿಸಿಕೊಂಡ ನಂತರ ಪುಸ್ತಕ ಖರಿದಿಸಿ ಎಲ್ಲರಿಗು ವಂದಿಸಿ ಅಮಿತನಂದದಿಂದ ಮಾಯವಾದೆ.
ಶೀ ಮೋಹನ್, ಶ್ರೀ ಹಂಸಲೇಖ, ಶೀ ಜೋಗಿ, ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಶ್ರೀ ಗೋಪಾಲ ಕೃಷ್ಣ ಕುಂಟಿನಿ,
ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ರೊಂದಿಗೆ

ಶ್ರೀ T.N. ಸೀತಾರಾಂ ರೊಂದಿಗೆ,

ಶ್ರೀ ಹಂಸಲೇಖ ರೊಂದಿಗೆ
ವಂದೇ ಮಾತರಂ

5 comments:

  1. ಚೆನ್ನಾಗಿದೆ ನವೀನ್, ನಿಮ್ಮ ಬ್ಲಾಗ್ ನೋಡಿ, ಓದಿ, ಖುಷಿಯಾಯಿತು.

    ReplyDelete
  2. ನಮಸ್ತೆ ಪರಾಂಜಪೆ ಸರ್, ಬ್ಲಾಗ್ ಮೆಚ್ಚಿದಕ್ಕೆ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ..

    ReplyDelete
  3. ನವೀನ್...

    ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು...
    ನಿಮ್ಮ ಸಾಹಿತ್ಯ ಆಸಕ್ತಿ ಕಂಡು ಖುಷಿಯಾಗುತ್ತದೆ...
    ಮುಂದುವರಿಯಲಿ...

    ನೀವಾಗಿಯೇ ಬಂದು ನನ್ನ ಪರಿಚಯ ಮಾಡಿಕೊಂಡಿದ್ದು ಮತ್ತು ಖುಷಿಯಾಯಿತು...

    ಇನ್ನಷ್ಟು ಬರೆಯಿರಿ...

    ReplyDelete
  4. ಪ್ರಕಾಶಣ್ಣ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ...

    ReplyDelete
  5. ಹಳ್ಳೀ ಹುಡುಗನ ಬೆಳ್ಳಿ ಪರದೆ ಮತ್ತು ಚಿನ್ಕುರ್ಳಿ ಪರದೆ ದಿಗ್ಗಜರು ಚನ್ನಾಗಿ ಪರಿಚಯವೋ...??
    ಸುಭವಾಗಲಿ..ನಿಮಗೆ...ನಿಮ್ಮ ಕೆಲಸದಲ್ಲಿ...ನಮ್ಮ ಗೂಡಿಗೂ ಬನ್ನಿ ಸ್ವಾಮಿ...

    ReplyDelete