Monday, August 3, 2009

ದಶಕ ಕಳೆದ ಸಂತೋಷದಲ್ಲಿ...

ನಮಸ್ತೆ
ಹತ್ತು ವರ್ಷ ನನ್ನನ್ನು ಸಾಕಿ ಸಲುಹಿದ ಹಾಗು ಸಲುಹುತ್ತಿರುವ ಬೆಂಗಳೂರೆಂಬ ಮಹಾ(ಯಾ)ನಗರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ರೈತನಾಗ ಬಯಸಿದ್ದವನನ್ನ ಒಬ್ಬ ಇಂಜಿನಿಯರ್, ಒಬ್ಬ ಅಧ್ಯಾಪಕನನ್ನಾಗಿ ಪರಿವರ್ತಿಸಿದ ಇ-ಊರಿಗೆ ಜೈ ಹೋ.

ನಾನು ಚಿಕ್ಕವನಿದ್ದಗಲಿಂದಲೂ ರೈತನಾಗಬೇಕೆಂಬ ತುಡಿತ ಬಹಳಷ್ಟಿತ್ತು. ಆದರೆ ನನ್ನ ತಾಯಿಯ ಆಸೆಯಂತೆ ಇಂಜಿನಿಯರ್ ಆಗಲು ಹತ್ತನೇ ತರಗತಿ ಮುಗಿಸಿದ ನಂತರ ೧೯೯೯ರ ಆಗಸ್ಟ್ ೨ ರಂದು ಬೆಂಗಳೂರಿಗೆ ಕಾಲಿಟ್ಟಾಗ ಇವನ್ನೊಬ್ಬ ಅಪ್ಪಟ ಹಳ್ಳಿ ಹೈದ( ನನ್ನ ಗೆಳೆಯರಿಗೆ ಹಾಗು ಸಹಪಾಟಿಗಳಿಗೆ ಹಳ್ಳಿ ಗುಗ್ಗು). ಮೊದ ಮೊದಲಿಗೆ ಹಳ್ಳಿಯವನೆಂದು ನನ್ನನ್ನು ಮಾತನಾಡಿಸಲು ಹಿಂಜರಿಯುತ್ತಿದ್ದ ನನ್ನ ಸಹಪಾಟಿಗಳು ನಂತರ ಒಬ್ಬಬರಾಗಿ ಒಳ್ಳೆಯ ಸ್ನೇಹಿತರಾದರು.

ಅಷ್ಟೇನೂ ಬುದ್ಧಿವಂತನಲ್ಲದ ನನ್ನನ್ನು ಬಹಳಷ್ಟು ಶ್ರದ್ದೆ ಮತ್ತು ಆಸಕ್ತಿಯಿಂದ ಬೆಳೆಸಿದ ನನ್ನ ಅಷ್ಟು ಮಂದಿ ಶಿಕ್ಷಕರಿಗೆ ನಾನು ಚಿರಋಣಿ. ದೊರೆತ ಸಾಫ್ಟವೇರ್ಇಂಜಿನಿಯರ್ ಉದ್ಯೋಗವನ್ನು ತ್ಯಜಿಸಿ ಅಧ್ಯಾಪಕ ವೃತ್ತಿಯನ್ನು ಅಯುದುಕೊಳ್ಳಲು ಅದೇ ಕಾರಣ.

ನನ್ನನ್ನು ಪರೋಕ್ಷವಾಗಿ ಮತ್ತು ಪ್ರತ್ಯೆಕ್ಷವಾಗಿ ಬೆಳೆಸಿದ ಎಲ್ಲರಿಗು ನಾನು ಚಿರಋಣಿ.

ಮುಂದೆ ಒಂದು ದಿನ ರೈತನಾಗುವೆನೆಂಬ ಆಶಯದೊಂದಿಗೆ ಜೀವಿಸುತ್ತಿರುವ....

ವಂದೇ ಮಾತರಂ..

6 comments:

  1. ನವೀನ್,

    ನಿಮ್ಮ ಇಛ್ಛಾಶಕ್ತಿ ತುಂಬಾ ದೊಡ್ಡದು. ನೀವು ಹಣದ ಹಿಂದೆ ಬೀಳದೆ ನಿಮಗೆ ಖುಷಿಕೊಡುವ ಉದ್ಯೋಗ ಆರಿಸಿಕೊಂಡಿದ್ದು ನನಗೆ ತುಂಬಾ ಖುಷಿಯಾಯ್ತು..

    ReplyDelete
  2. ಎಲ್ಲಿಂದಲೋ ಬಂದವರಿಗೆ ದಾರಿ ಕಾಣದೆ ನಿಂತಾಗ ಕೈ ಹಿಡಿದ, ಹೊಟ್ಟೆಗೆ ಮುಷ್ಟಿ ಅನ್ನ ಕೊಡುತ್ತಿರುವ ಬೆಂಗಳೂರಿಗೆ...ಒಂದು ಜೈ ಹೋ.
    ಮುಂದೆ ನೀವು ನೇಗಿಲ ಯೋಗಿ ಆಗಿರೆಂದು ಹಾರೈಸುವೆ.

    ReplyDelete
  3. ಶಿವಣ್ಣ ಧನ್ಯವಾದಗಳು.. ಬಾಲಣ್ಣ ನನ್ನನ್ನು ಹರಿಸಿದ್ದಕ್ಕೆ ಧನ್ಯವಾದಗಳು..

    ReplyDelete
  4. ನಿಮ್ಮ ಉನ್ನತ ಧ್ಯೇಯೋದ್ದೇಶಗಳನ್ನು ಓದಿ ತುಂಬಾ ಸಂತೋಷವಾಯಿತು. ವೃತ್ತಿಯಲ್ಲಿ ಇಂಜಿನೀಯರ್ ಆಗಿಯೂ ಪ್ರವೃತ್ತಿಯಲ್ಲಿ ನಿಮ್ಮ ಮೂಲವನ್ನು ಮರೆಯದಿರುವುದು ನಿಜಕ್ಕೂ ಶ್ಲಾಘನೀಯ. ನಿಮ್ಮ ಆಶಯ ಈಡೇರಲೆಂದು ಹಾರೈಸುವೆ.

    ReplyDelete
  5. ನಿಜವಾಗಲೂ ನನಗೆ ಏನು ಹೇಳ್ಬೇಕು ಅಂತನೆ ಗೊತ್ತಾಗ್ತಾಯಿಲ್ಲ ..ನಿಮ್ಮನ್ನ ,ನಿಮ್ಮ ಪ್ರತಿಭೆಯನ್ನ , ನಿಮ್ಮ ತುಡಿತವನ್ನ ಒಮ್ಮೊಮ್ಮೆ ನೋಡಿದಾಗಲೂ ನನಗೆ ಒಂದೊಂದು ಭಿನ್ನತೆ ಕಾಣ್ತಾಯಿದೆ...

    ಹಳ್ಳಿ ಅಂದ್ರೆ ನಂಗೂ ತುಂಬಾ ತುಂಬಾ ಇಷ್ಟ ....ನಗರ ಜೀವನದ ಜಂಜಾಟ ಸಾಕಾಗೋಗಿದೆ ...ಇಲ್ಲಿ ನಮ್ಮ ಭಾವನೆಗಳನ್ನ ವ್ಯಕ್ತಪದಿಸ್ಬೇಕಾದ್ರು ಎಚ್ಚರಿಕೆಯಿಂದ ಇರಬೇಕು ...ಬಿಟ್ರೆ ಈಗಲೂ ಹಳ್ಳಿಗೆ ಓಡಿಹೋಗೋಣ ಅಂತಿದೀನಿ ...
    ನಾನು ಮೊದಲೇ ಭಾವುಕ ...ನೀವು ಇನ್ನಷ್ಟು ಭಾವುಕತೆ ತುಂಬಿ ಬಿಟ್ರಿ ...
    ನನ್ನ ಮನದಾಳದಿಂದ ಹೇಳ್ತಿದೀನಿ ..ನಿಜವಾಗಲೂ ನೀವೇನಾದ್ರು ನೇಗಿಲು ಹಿಡಿಯೋದೇ ಆದ್ರೆ ನಾನೇ ಅದಕ್ಕೆ ಮೊದಲ ಎತ್ತಾಗ್ತೀನಿ ...

    ReplyDelete